ಇಸ್ಕಾನ್ ದೇಗುಲಕ್ಕೂ ಬೆದರಿಕೆ
ತಿರುಪತಿ: ದೇಶದ ಹಲವು ವಿಮಾನಗಳು, ಪ್ರತಿಷ್ಠಿತ ಹೊಟೇಲ್ಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಈಗ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿನ ಇಸ್ಕಾನ್ ದೇವಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
Advertisement
ಈ ಸಂದೇಶದಲ್ಲಿ ಐಸಿಸ್ ಉಗ್ರರು ದೇವಾಲಯವನ್ನು ಸ್ಫೋಟಿಸಲಿದ್ದಾರೆ ಎಂದು ತಿಳಿಸಲಾಗಿದೆ. ಈ ಸಂದೇಶ ಬಂದ ಬೆನ್ನಲ್ಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕಾಗಮಿಸಿ ಎಲ್ಲೆಡೆ ಶೋಧ ನಡೆಸಿದೆ. ಆದರೆ, ಯಾವುದೇ ಸ್ಫೋಟಕ, ಅನುಮಾನಾಸ್ಪದ ವಸ್ತುಗಳು ಲಭ್ಯವಾಗಿಲ್ಲ. ಇದರೊಂದಿಗೆ ತಿರುಪತಿಯಲ್ಲಿ ಕಳೆದ 3 ದಿನಗಳಿಂದ ಬಂದ 4ನೇ ಬಾಂಬ್ ಬೆದರಿಕೆ ಇದಾಗಿದೆ. ಶನಿವಾರ 2 ಹೊಟೇಲ್ಗಳಿಗೂ ಬಾಂಬ್ ಬೆದರಿಕೆ ಬಂದಿತ್ತು.