Advertisement
ಮತ್ತೂಂದೆಡೆ ಬುಧ ವಾರ ರಾತ್ರಿ 3ನೇ ಬಾರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವ ರನ್ನು ಎಸ್ ಐಟಿ ಅವರ ಮನೆಯಲ್ಲೇ ವಿಚಾರಣೆ ನಡೆಸಿದೆ. ಇತ್ತೀಚೆಗೆ ಪ್ರಕರಣದ ಕಿಂಗ್ ಪಿನ್ ಎನ್ನ ಲಾದ ಪತ್ರ ಕರ್ತ ನರೇ ಶ್ ಗೌ ಡನ ಮನೆ ಯಲ್ಲಿದ್ದ ಲ್ಯಾಪ್ ಟಾಪ್ ರಿಟ್ರೈವ್ ಮಾಡಿ ದಾಗ ಕತ್ತರಿ ಹಾಕದ ವಿಡಿಯೋ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಹಲವು ಅನುಮಾನಗಳು: ಈ ಹಿಂದೆ ಬಿಡುಗಡೆಯಾದ ವಿಡಿಯೋದಲ್ಲಿ ಯುವತಿಯ ಮುಖ ಚಹರೆ ಸಂಪೂರ್ಣವಾಗಿ ಕಾಣುತ್ತಿತ್ತು. ಆದರೆ, ಗುರುವಾರ ಬಿಡುಗಡೆ ಯಾಗಿರುವ ಎರಡನೇ ವಿಡಿಯೊದಲ್ಲಿ ಯುವ ತಯ ಮುಖ ಭಾಗಶಃ ಮುಸುಕಾಗಿದೆ. ಅಲ್ಲದೆ, ಆಕೆಯ ಮಾತ ನಾ ಡುವ ಸಂದರ್ಭದಲ್ಲಿ ಮಕ್ಕಳು ಅಳುವ ಮತ್ತು ಆಟ ವಾಡುತ್ತಿರುವ ಹಿನ್ನೆಲೆ ಧ್ವನಿ ಕೇಳಿ ಬರುತ್ತಿದೆ. ಹೀಗಾಗಿ ಯುವತಿ ರಾಜ್ಯ ಅಥವಾ ಹೊರ ರಾಜ್ಯ ದಲ್ಲೇ ಸಂಬಂಧಿ ಅಥವಾ ಸ್ನೇಹಿತರ ಮನೆಯಲ್ಲಿ ಅಡ ಗಿ ಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಿಡುಗಡೆಯಾದ ವಿಡಿಯೋ ಎಡಿಟ್ ಆಗಿರುವ ವಿಡಿಯೋ ಆಗಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಎಸ್ ಐಟಿ ಸಂವಹನ ಕೊರತೆ? :
ಸಣ್ಣ ಸಾಕ್ಷ್ಯವಿಲ್ಲದ ಪತ್ರ ಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ವಿಶೇಷ ತನಿಖಾ ತಂಡದ ತನಿಖಾಧಿಕಾರಿ ಎಂ.ಎ ನ್. ಅನುಚೇತ್ ಸೇರಿ ಶೇ.85 ಅಧಿಕಾರಿಗಳು ಸಿಡಿ ಪ್ರಕರಣದ ಎಸ್ ಐಟಿಯಲ್ಲಿದ್ದಾರೆ. ಆದರೂ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರನ್ನು ಪತ್ತೆ ಹಚ್ಚಲು ಸಾಧ್ಯ ವಾಗುತ್ತಿಲ್ಲ. ಈಗಾಗಲೇ ಸಿಡಿ ಯುವತಿ ಎರಡು ಹೇಳಿಕೆ ವಿಡಿಯೋ ಬಿಡುಗಡೆ ಮಾಡಿದ್ದು, ಕಿಂಗ್ ಪಿನ್ ಎನ್ನಲಾದ ಪತ್ರ ಕರ್ತ ನರೇಶ್ ಗೌಡ ಕೂಡ ಒಂದು ಹೇಳಿಕೆ ವಿಡಿಯೋ ಬಿಡು ಗಡೆ ಮಾಡಿ ಎಸ್‌ಐಟಿಗೆ ಸವಾಲು ಎಸೆದಿದ್ದರು. ಆದರೂ ಅವರು ಅಡಗಿಕೊಂಡಿರುವ ಸ್ಥಳ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಎಸ್ ಐ ಟಿಗೆ ಸರ್ಕಾರದ ಕೆಲ ನಾಯಕರ ಒತ್ತಡ ಇದೆಯೇ? ಅಥವಾ ಎಸ್ ಐಟಿಯ ಹಿರಿಯ ಅಧಿಕಾರಿಗಳ ನಡುವೆಯೇ ಸಂವಹನದ ಕೊರತೆಯಿಂದಾಗಿ ಸಿಡಿ ಪ್ರಕರಣ ತನಿಖಾ ದಿಕ್ಕು ತಪ್ಪುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹೇಳಬೇಕಾದದ್ದು ಸದನದಲ್ಲೇ ಹೇಳಿದ್ದೇನೆ. ಯುವತಿಗೆ ರಕ್ಷಣೆ ನೀಡುವುದು, ದೌರ್ಜನ್ಯ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. – ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ