Advertisement
ಪ್ರಕರಣದಲ್ಲಿ ಜಾರಕಿಹೊಳಿ ಕುಟುಂಬದ ಹೆಸರು ಪ್ರಸ್ತಾವ ವಾಗಿರುವುದರಿಂದ ಇದನ್ನು ಅಸ್ತ್ರ ವಾಗಿಸುವುದು ಕಾಂಗ್ರೆಸ್‌ಗೆ ಸುಲಭ ವಾಗಿಲ್ಲ. ಕಾಂಗ್ರೆಸ್‌ಗೆ ಇದು ಬಹು ಉತ್ತಮ ಆಹಾರ ಎನ್ನುವಂತಿದ್ದರೂ ಸತೀಶ್ ಜಾರಕಿಹೊಳಿ ಕಾರಣದಿಂದ ಅದನ್ನು ನುಂಗುವ ಸ್ಥಿತಿಯಲ್ಲಿಲ್ಲ.
Related Articles
Advertisement
ಸಿ.ಡಿ. ವಿಷಯ ಬಹಿರಂಗವಾದ ಬಳಿಕ ಸತೀಶ್ ಜಾರಕಿಹೊಳಿ ಅಧಿವೇಶನದಲ್ಲಿ ಭಾಗವಹಿಸಿಲ್ಲ. ಈ ವಿಷಯ ಪಕ್ಷದೊಳಗೆ ಚರ್ಚೆಯಾಗದಂತೆ ನೋಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರೂ ಅಂತರ ಕಾಯ್ದು ಕೊಂಡಿದ್ದಾರೆ. ಹೀಗಿರು ವಾಗ ಸತೀಶ್ ಜಾರಕಿಹೊಳಿ ಅವರು ಚುನಾವಣೆಯಲ್ಲಿ ಸಿ.ಡಿ. ವಿಷಯವನ್ನು ಪ್ರಸ್ತಾ ವಿಸುವುದು ಕಷ್ಟ ಎನ್ನಲಾಗುತ್ತಿದೆ.
ಉಸ್ತುವಾರಿ ಸಮಸ್ಯೆ :
ಗಡಿ ಜಿಲ್ಲೆಯಲ್ಲಿ ಈಗ ಉಪ ಚುನಾ ವಣೆಯದ್ದೇ ಚರ್ಚೆ. ಕೊರೊನಾ ಭೀತಿ ಮತ್ತೆ ಕಾಣಿಸಿಕೊಂಡಿದ್ದರೂ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ ಎಂಬುದಕ್ಕೆ ಭರ್ಜರಿ ಸಿದ್ಧತೆಗಳೇ ಸಾಕ್ಷಿ. ಚುನಾವಣೆ ವೇಳೆ ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿರುವುದು ಬಿಜೆಪಿ ಉಸ್ತುವಾರಿ ವಿಷಯ. ಜಿಲ್ಲೆಯ ಯಾವ ನಾಯಕರ ಹೆಗಲಿಗೆ ಈ ಹೊಣೆ ಬೀಳಲಿದೆ ಎಂಬ ಕುತೂ ಹಲವಿದೆ. ಸಿ.ಡಿ. ಪ್ರಕರಣದಲ್ಲಿ ಸಿಲುಕಿರುವ ರಮೇಶ್ ಜಾರಕಿಹೊಳಿ ಪಾತ್ರ ಏನು, ರಮೇಶ್ ಇಲ್ಲದಿದ್ದರೆ ಬಾಲಚಂದ್ರ ಜಾರಕಿಹೊಳಿ ಏನು ಮಾಡುತ್ತಾರೆಂಬ ಚರ್ಚೆ ನಡೆಯುತ್ತಿದೆ.
ಸಿ.ಡಿ. ಪ್ರಕರಣಕ್ಕೆ ಮೊದಲು ರಮೇಶ್ ಜಾರಕಿಹೊಳಿ ಅವರು, ಬೆಳಗಾವಿಯಲ್ಲಿ ಬಿಜೆಪಿ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದು, ಅದಕ್ಕಾಗಿ ತಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎನ್ನುತ್ತಿದ್ದರು. ಈಗ ಅವರು ಬಹಿರಂಗವಾಗಿ ಕಾಣಿಸಿಕೊಳ್ಳದಿರುವುದು ಬೆಂಬಲಿ ಗರಲ್ಲಿ ನಿರಾಸೆ ಮೂಡಿಸಿದೆ.
ಮೂರು ಕ್ಷೇತ್ರಗಳ ಮೇಲೆ ಪರಿಣಾಮ? :
ಸಿ.ಡಿ. ಪ್ರಕರಣ ಮೂರು ಕ್ಷೇತ್ರಗಳ ಉಪ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆಯೇ ಎನ್ನುವ ಚರ್ಚೆ ಆರಂಭವಾಗಿದೆ. ಅದರಲ್ಲೂ ಬೆಳಗಾವಿ ಹಾಗೂ ಮಸ್ಕಿ ಕ್ಷೇತ್ರದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಉಸ್ತುವಾರಿಗೆ ಸವದಿ, ಕತ್ತಿ ಪೈಪೋಟಿ :
ಸಿ.ಡಿ. ಪ್ರಕರಣಕ್ಕೆ ಮುನ್ನ ಬಿಜೆಪಿ ಸಿದ್ಧಪಡಿಸಿದ್ದ ಉಪ ಚುನಾವಣೆ ಉಸ್ತುವಾರಿ ಪಟ್ಟಿಯಲ್ಲಿ ರಮೇಶ್ ಜಾರಕಿಹೊಳಿ ಹೆಸರಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಉಸ್ತುವಾರಿ ಪೈಪೋಟಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
– ಕೇಶವ ಆದಿ