Advertisement

ಕ್ವಾರಂಟೈನ್‌ನಲ್ಲಿರುವವರ ಮೇಲೆ ಕಣ್ಣಿಡಲು CCTV ಅಳವಡಿಕೆಗೆ ಸೂಚನೆ

10:26 PM Apr 12, 2021 | Team Udayavani |

ಮುಂಬೈ: ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟಿರುವ ಸೋಂಕಿತರು, ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಅವರ ಕೊಠಡಿಯ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಸೂಚಿಸಿದೆ.

Advertisement

ಆಸ್ಪತ್ರೆಗಳ ಸ್ಥಿತಿಗತಿ ಕುರಿತಾಗಿ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ವಿಭಾಗೀಯ ಪೀಠದ ನ್ಯಾ. ಸುನೀಲ್‌ ಶುಕ್ರೆ ಮತ್ತು ಅವಿನಾಶ್‌ ಘರೋಟೆ ಈ ಸೂಚನೆ ಹೊರಡಿಸಿದ್ದಾರೆ. “ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಸೋಂಕಿತರು ಅಜಾಗರೂಕತೆ ಮತ್ತು ಅಪಾಯಕಾರಿ ನಡವಳಿಕೆಗಳನ್ನು ತೋರ್ಪಡಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಸಂಗತಿಗಳೇ ಮುಂದೆ ಸೋಂಕು ಹೆಚ್ಚಳಕ್ಕೆ ಆಸ್ಪದ ಮಾಡಿಕೊಡುತ್ತವೆ. ಹೀಗಾಗಿ, ಸಿಸಿಟಿವಿ ಅಳವಡಿಸಿ, ಇವರ ಮೇಲೆ ನಿಗಾ ಇಡುವುದು ಒಳ್ಳೆಯದು’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ :ದೇಶೀಯ ವಿಮಾನಗಳಲ್ಲಿ ಲಂಚ್‌ಗೆ “ಬ್ರೇಕ್‌’! ಕೇಂದ್ರ ಸರ್ಕಾರ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next