ಬೆಂಗಳೂರು: ಡಾರ್ಕ್‌ವೆಬ್‌ಸೈಟ್‌ನಲ್ಲಿ ಡ್ರಗ್ಸ್ ಖರೀ ದಿಸಿ ಬಿಟ್‌ಕಾಯಿನ್ ಮೂಲಕ ಹಣ ಪಾವತಿಸುತ್ತಿದ್ದ ಕೇರಳ ಮೂಲದ ಪೆಡ್ಲರ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೇರಳದ ಮೊಹಮ್ಮದ್ ರನಾನ್ (27) ಬಂಧಿತ.
ಆತ ನಿಂದ 49.30 ಗ್ರಾಂನ 90 ಎಕ್ಸ್ಟೈಸಿ ಮಾತ್ರೆಗಳು, 40 ಗ್ರಾಂ ಚರಸ್, 5 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ 1 ಲ್ಯಾಪ್‌ಟಾಪ್ ಸೇರಿ 6.5 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಆರೋಪಿ ಡಾರ್ಕ್‌ವೆಬ್ ವೆಬ್‌ಸೈಟ್‌ನಲ್ಲಿ ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ಡ್ರಗ್ಸ್ ಖರೀದಿಸುತ್ತಿದ್ದ. ನಂತರ ವಿದೇಶದಿಂದ ನಗರಕ್ಕೆ ಡ್ರಗ್ಸ್ ತರಿಸಿ ಕಾಲೇಜು ವಿದ್ಯಾರ್ಥಿಗಳು, ಟೆಕಿಗಳು ಹಾಗೂ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ.
ಪ್ರತಿ 1 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌ಗೆ 8 ಸಾವಿರ ರೂ. ನಿಂದ 10 ಸಾವಿರ ರೂ., ಚರಸ್ 1 ಗ್ರಾಂಗೆ 1 ಸಾವಿರ ರೂ. ನಿಂದ 1,500 ರೂ. ಹಾಗೂ 1 ಎಕ್ಸ್ಟೈಸಿ ಪಿಲ್ಸ್‌ಗೆ 6 ಸಾವಿರ ರೂ. ನಿಂದ 7 ಸಾವಿರ ರೂ.ನಂತೆ ಮಾರಾಟ ಮಾಡುತ್ತಿದ್ದ. ಈ ಖಚಿತ ಮಾಹಿತಿ ಮೇರೆಗೆ ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಆರೋಪಿ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೀಲಗಳಲ್ಲಿ ಗಾಂಜಾ ತುಂಬಿ ಮಾರಾಟ :
ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋ ಪದ ಮೇಲೆ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಮಂಜು (32) ಬಂಧಿತ. ಆರೋಪಿ ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ವಿದ್ಯಾರ್ಥಿಗಳು, ಟೆಕಿಗಳಿಗೆ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಚೀಲದಲ್ಲಿ ಗಾಂಜಾ ತುಂಬಿಕೊಂಡು ಮಾರಾಟಕ್ಕೆ ಮುಂದಾಗಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.