Advertisement
ಪಟ್ಟಣದ ಚನ್ನಬಸವಾಶ್ರಮ ಪರಿಸರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆದ ಸಾರ್ವಜನಿಕ ಸುರಕ್ಷಾ ಕ್ರಮ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ, ಅತ್ಯಾಚಾರ, ಕೊಲೆ, ಸುಲಿಗೆ, ಕಳ್ಳತನದಂತಹ ಪ್ರಕರಣಗಳಿಗೆ ತಡೆ ಹಾಕಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಜರುಗಿಸುತ್ತಿದೆ. ಇದಕ್ಕೆ ಸಾರ್ವಜನಿಕರು ಕೈ ಜೊಡಿಸಬೇಕಿದೆ.
ಮಾರುಕಟ್ಟೆ ಪ್ರದೇಶದಲ್ಲಿ ಸ್ಥಳೀಯ ವ್ಯಾಪಾರಸ್ಥರು ರಕ್ಷಣಾ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಬೇಕು. ಇದರಿಂದ ಹಂತಕರಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು. ವ್ಯಾಪಾರಸ್ಥರು, ಪ್ರಮುಖರು, ಸಿಸಿ ಕ್ಯಾಮರಾವನ್ನು ಕೇವಲ ಕಾಟಾಚಾರಕ್ಕೆ ಎಂಬಂತೆ ಅಳವಡಿಸಬಾರದು. ಅಂಗಡಿ ಮುಂಭಾಗದ ರಸ್ತೆ, ಅಂಗಡಿ ಒಳಗೆ ಗುಣಮಟ್ಟದಿಂದ ಕೂಡಿರುವ ಸಿಸಿ ಕ್ಯಾಮರಾಗಳಲ್ಲಿ ಕನಿಷ್ಟ 30 ದಿನದ ವರೆಗೆ ರಿರ್ಕಾಡಿಂಗ್ ಸಾಮಾರ್ಥ್ಯ ಇರುವಂಥ ಸಿಸಿ ಕ್ಯಾಮರಾ ಸಂಬಂಧ ಪಟ್ಟವರು ಜೋಡಣೆ ಮಾಡಿಕೊಳ್ಳಬೇಕು ಎಂದರು. ಪೊಲೀಸ್ ಇಲಾಖೆಯ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ 2ರಿಂದ 10 ಸಾವಿರದ ವರೆಗೆ ದಂಡ ಬೀಳಲಿದೆ. ಅದನ್ನು ಮೀರಿದರೆ ಸಂಬಂಧಿತ ಸಂಸ್ಥೆ, ಅಂಗಡಿ ಪರವಾನಗಿ ರದ್ದು ಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement