ಹೊಸದಿಲ್ಲಿ : ಪ್ರಶ್ನೆ ಪತ್ರಿಕೆಗಳು ಸೋರಿ ಹೋಗಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಎಸ್‌ಇ 12ನೇ ತರಗತಿಯ ಇಕಾನಮಿಕ್ಸ್ (ಅರ್ಥಶಾಸ್ತ್ರ) ಪರೀಕ್ಷೆಯನ್ನು ಮತ್ತು 10ನೇ ತರಗತಿಯ ಗಣಿತ ಪರೀಕ್ಷೆಯನ್ನು ಪುನಃ ನಡೆಸಲಿದೆ.
ಈ ಸಂಬಂಧ ಸಿಬಿಎಸ್‌ಇ ಅಧಿಕೃತ ಪ್ರಕಟನೆಯೊಂದನ್ನು ಹೊರಡಿಸಿ, ಪರೀಕ್ಷಾ ನಡವಳಿಗೆಯಲ್ಲಿ ಕೆಲವೊಂದು ವಿದ್ಯಮಾನ ಸಂಭವಿಸಿರವುದನ್ನು ನಾವು ಮನಗಂಡಿದ್ದು ಪುನರಪಿ ಪರೀಕ್ಷೆ ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಪುನರ್ ಪರೀಕ್ಷೆಯ ಹೊಸ ದಿನಾಂಕಗಳನ್ನು ಮತ್ತು ಇತರ ವಿವರಗಳನ್ನು ಮಂಡಳಿಯ ವೆಬ್‌ಸೈಟಿನಲ್ಲಿ ಸದ್ಯದಲ್ಲೇ ಪ್ರಕಟಿಸಲಾಗುವುದು’ ಎಂದು ಹೇಳಿದೆ.
ಸಿಬಿಎಸ್‌ಇ ಪರೀಕ್ಷೆಗಳಿಗೆ ಈ ಬಾರಿ 28 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕುಳಿತಿದ್ದಾರೆ.ಈ ಪೈಕಿ ಹತ್ತೆನೇ ತರಗತಿಯ ಪರೀಕ್ಷೆಗೆ 16,38,429 ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ. 12ನೇ ತರಗತಿಯ ಪರೀಕ್ಷೆಗಳಿಗೆ 11,86,306 ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ.