Advertisement

ಏ.26ರಿಂದ ಸಿಬಿಎಸ್‌ಇ 2ನೇ ಹಂತದ ಪರೀಕ್ಷೆ

08:47 PM Mar 11, 2022 | Team Udayavani |

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯ 10 ಮತ್ತು 12ನೇ ತರಗತಿಯ ಎರಡನೇ ಅವಧಿಯ ಪರೀಕ್ಷೆಯು ಏ.26ರಿಂದ ಆರಂಭವಾಗಲಿದೆ.

Advertisement

ಈಗಾಗಲೇ ಮೊದಲ ಅವಧಿಯ ಪರೀಕ್ಷೆಯು ಮುಗಿದಿದೆ. 2022ರ ಬೋರ್ಡ್‌ ಪರೀಕ್ಷೆಯು ಎರಡು ಅವಧಿಗಳಲ್ಲಿ ನಡೆಯಲಿದೆ ಎಂದು ಕಳೆದ ವರ್ಷವೇ ಸಿಬಿಎಸ್‌ಇ ಘೋಷಿಸಿತ್ತು.

ಇದನ್ನೂ ಓದಿ:ಗೋವಾ: ಸೋಮವಾರ ಸದನವನ್ನು ವಿಸರ್ಜಿಸಲು ನಿರ್ಧರಿಸಿದ ಸಾವಂತ್

ಶುಕ್ರವಾರ 2ನೇ ಅವಧಿಯ ಪರೀಕ್ಷಾ ದಿನಾಂಕಗಳನ್ನು ಮಂಡಳಿ ಪ್ರಕಟಿಸಿದ್ದು, 12ನೇ ತರಗತಿ ಪರೀಕ್ಷೆಗಳು ಏ.26ರಿಂದ ಜೂ.15ರವರೆಗೆ ಹಾಗೂ 10ನೇ ತರಗತಿ ಪರೀಕ್ಷೆಗಳು ಏ.26ರಿಂದ ಮೇ 12ರವರೆಗೆ ನಡೆಯಲಿದೆ ಎಂದು ಹೇಳಿದೆ.

ಭೌತಿಕವಾಗಿ ಅಂದರೆ ಆಫ್ ಲೈನ್‌ನಲ್ಲಿ ಈ ಪರೀಕ್ಷೆಗಳು ನಡೆಯಲಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next