Advertisement

40 ಕೋಟಿ ವಂಚನೆ : ಆಪ್‌ ಶಾಸಕನ ನಿವಾಸಕ್ಕೆ ಸಿಬಿಐ ದಾಳಿ

10:46 PM May 07, 2022 | Team Udayavani |

ಪಂಜಾಬ್‌ : ಪಂಜಾಬ್‌ನ ಆಪ್‌ ಶಾಸಕ ಜಸ್ವಂತ್‌ ಸಿಂಗ್‌ ಗಜ್ಜನ್‌ ಮಜ್ರಾ ವಿರುದ್ಧ ಬ್ಯಾಂಕ್‌ಗಳಿಗೆ 40.92 ಕೋಟಿ ರೂ. ಮೊತ್ತ ವಂಚಿಸಿದ ಆರೋಪ ಕೇಳಿ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ಸಂಗ್ರೂರ್‌ನಲ್ಲಿ ಅವರ ನಿವಾಸ ಸೇರಿದಂತೆ ಮೂರು ಸ್ಥಳಗಳ ಮೇಲೆ ಸಿಬಿಐ ಶನಿವಾರ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ.

Advertisement

ಬ್ಯಾಂಕ್‌ ಆಪ್‌ ಇಂಡಿಯಾಕ್ಕೆ ಶಾಸಕರು ವಂಚಿಸಿದ್ದಾರೆ. ಶೋಧದ ವೇಳೆ, ವಿವಿಧ ಮಂದಿಯ ಸಹಿ ಇರುವ 94 ಚೆಕ್‌ ಹಾಳೆಗಳು, 88 ವಿದೇಶಿ ಕರೆನ್ಸಿಗಳು ಹಾಗೂ ಆಧಾರ್‌ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ಸಿಬಿಐ ವಕ್ತಾರ ಆರ್‌.ಸಿ.ಜೋಷಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ 16.57 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಬ್ಯಾಂಕ್‌ನಿಂದಲೂ ದೂರು ಸಲ್ಲಿಕೆಯಾಗಿತ್ತು.

ಇದನ್ನೂ ಓದಿ : ಮಂಗಳೂರು : ಮೇ 8ಕ್ಕೆ ಎಲ್ಲೋ ಅಲರ್ಟ್‌; ಮಳೆ ಸಾಧ್ಯತೆ

Advertisement

Udayavani is now on Telegram. Click here to join our channel and stay updated with the latest news.

Next