Advertisement

ಸೋನಾಲಿ ಫೋಗಟ್ ಸಾವಿನ ಸಿಬಿಐ ತನಿಖೆ ಚುರುಕು: ಹಲವರ ತೀವ್ರ ವಿಚಾರಣೆ

02:55 PM Sep 19, 2022 | Team Udayavani |

ಪಣಜಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದಲ್ಲಿ, ಸಿಬಿಐ ತಂಡವು ವಿಧಿವಿಜ್ಞಾನ ತಜ್ಞರೊಂದಿಗೆ ಗೋವಾದ ಹಣಜುಣದ ಲ್ಲಿರುವ ಕರ್ಲಿಸ್ ಬೀಚ್ ಶಾಕ್ ರೆಸ್ಟೋರೆಂಟ್‍ಗೆ ಭೇಟಿ ನೀಡಿ ತನಿಖೆ ನಡೆಸಿದೆ.

Advertisement

ಸೋನಾಲಿ ಅವರು ಪ್ರಜ್ಞಾಹೀನರಾಗಿದ್ದ  ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ‘ಕರ್ಲಿಸ್ ರೆಸ್ಟೋರೆಂಟ್‍ ಚಾಲಕ ಎಡ್ವಿನ್ ನ್ಯೂನ್ಸ್ ಮತ್ತು ಕೆಲವು ಉದ್ಯೋಗಿಗಳನ್ನು ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಲಾಗಿದೆ. ಇದಾದ ಬಳಿಕ ತಂಡ ಮತ್ತೆ ದಿ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‍ಗೆ ತೆರಳಿ ಮಾಹಿತಿ ಪಡೆದು ತನಿಖೆ ಆರಂಭಿಸಿದೆ.

ಇದನ್ನೂ ಓದಿ: ಇಡಿ ಕಚೇರಿಗೆ ಡಿಕೆ ಶಿವಕುಮಾರ್ ಹಾಜರು: ಕಿಡಿ ಕಾರಿದ ಸಹೋದರ

ಕಳೆದ ಶನಿವಾರ ದಿನವಿಡೀ ಲಿಯೋನಿ ರೆಸಾರ್ಟ್‍ನಲ್ಲಿ ಸೋನಾಲಿ, ಸಾಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ತಂಗಿದ್ದ 3 ಕೊಠಡಿಗಳನ್ನು ಸಿಬಿಐ ಕೂಲಂಕಷವಾಗಿ ಪರಿಶೀಲಿಸಿ ಸೀಲ್ ಮಾಡಿದೆ. ಅದಾದ ಬಳಿಕ ಸಿಬಿಐ ತಂಡ ಕರ್ಲಿಸ್ ಬೀಚ್ ಶಾಕ್ ರೆಸ್ಟೊರೆಂಟ್‍ಗೆ ತೆರಳಿ ತನಿಖೆ ನಡೆಸಿದೆ.ಎರಡು ಗಂಟೆಗಳ ಕಾಲ ಸೋನಾಲಿ ಫೊಗಟ್ ರವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸ್ಥಳವನ್ನು ಸಿಬಿಐ ತಂಡ ಪರಿಶೀಲನೆ ನಡೆಸಿದೆ.  ಆಗ ಇದ್ದ ನೌಕರರನ್ನು  ಕೂಡ ವಿಚಾರಿಸಿದೆ.

ಸೋನಾಲಿಯೊಂದಿಗೆ ಗೋವಾಕ್ಕೆ ಬಂದಿದ್ದ ಸೋನಾಲಿಯ ಪಿಎಗಳಾದ ಸುಧೀರ್ ಸಂಗ್ವಾನ್ ಮತ್ತು ಸುಖವಿಂದರ್ ಸಿಂಗ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಹೊಸದಾಗಿ ತನಿಖೆ ಆರಂಭಿಸುತ್ತಿದ್ದಂತೆ ತಂಡವು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

ಕಳೆದ ಎರಡು ದಿನಗಳಿಂದ ಗೋವಾ ಪೊಲೀಸರ ತನಿಖೆಯಲ್ಲಿನ ಲೋಪದೋಷಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಬಿಐ ಪ್ರಯತ್ನಿಸುತ್ತಿದೆ. ಸೋನಾಲಿ ಸಾವಿನ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ತಂಡ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next