Advertisement
1946ರ ದಿಲ್ಲಿ ವಿಶೇಷ ಪೊಲೀಸ್ ಸಂಸ್ಥೆ ಕಾಯಿದೆಯಡಿ ರೂಪಿಸಲಾಗಿರುವ ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ (CBI) ಇನ್ನು ಮುಂದೆ ಆಂಧ್ರ ಪ್ರದೇಶದ ವ್ಯಾಪ್ತಿಯೊಳಗೆ ತನ್ನ ತನಿಖಾಧಿಕಾರವನ್ನು ಚಲಾಯಿಸುವಂತಿಲ್ಲ.
Related Articles
Advertisement
ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಈ ಕ್ರಮದ ಪರಿಣಾಮವಾಗಿ ಆಂಧ್ರ ಪ್ರದೇಶ ವ್ಯಾಪ್ತಿಯೊಳಗಿನ ಯಾವುದೇ ಕೇಂದ್ರ ಸರಕಾರಿ ಕಾರ್ಯಾಲಯಗಳ ಮೇಲೆ, ಶಂಕೆಯ ಪ್ರಕರಣಗಳಲ್ಲಿ ದಾಳಿ, ಶೋಧ ಕಾರ್ಯ ನಡೆಸಬಹುದಾಗಿದೆ.
ಸಿಬಿಐ ನಲ್ಲಿ ಕಳೆದ ಆರು ತಿಂಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಟಿಡಿಪಿ ಲಂಕಾ ದಿನಕರ್ ಹೇಳಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರಕಾರ ಸಿಬಿಐ ಅನ್ನು ರಾಜಕೀಯ ವಿರೋಧಿಗಳ ವಿರುದ್ಧ ಅಸ್ತ್ರವನ್ನಾಗಿ ಬಳಸುತ್ತಿರುವ ಕಾರಣ ಸಿಬಿಐ ನ ಸ್ವಾಯತ್ತೆ ನಷ್ಟವಾಗಿದೆ ಎಂದು ದಿನಕರ್ ಹೇಳಿದ್ದಾರೆ.