ನವದೆಹಲಿ: ದೇಶದಲ್ಲಿ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ಅವರ ವಿಚಾರಣೆ ನಡೆಸಲು ಸಿಬಿಐಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಅವರ ವಿರುದ್ಧ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂ ಸಿದ ಆರೋಪಗಳಿವೆ. 2021ರ ಡಿ.31ರಂದು ನವದೆಹಲಿಯ ಸಿಬಿಐನ ವಿಶೇಷ ಕೋರ್ಟ್‌ಗೆ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲೂ ಈ ಅಂಶ ಪ್ರಸ್ತಾಪಿಸಲಾಗಿದೆ.
ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕು ಎಂದು ಕೇಂದ್ರ ತನಿಖಾ ಸಂಸ್ಥೆ ಸರ್ಕಾರದ ಅನುಮತಿ ಕೋರಿತ್ತು. ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ತನಿಖೆ ನಡೆಸಲಾಗಿತ್ತು.
ಇದನ್ನೂ ಓದಿ:ಇನ್ನು 8-9 ತಿಂಗಳಲ್ಲಿ ನೂತನ ಸಹಕಾರ ನೀತಿ: ಅಮಿತ್ ಶಾ
ಈ ಹಿನ್ನೆಲೆಯಲ್ಲಿ ಏ.18ರಂದು ಸಿಬಿಐನ ವಿಶೇಷ ಕೋರ್ಟ್ ಆರೋಪಪಟ್ಟಿಯ ಅಂಶಗಳನ್ನು ಪರಿಶೀಲನೆ ನಡೆಸಲಿದೆ.
ಕೆಲ ದಿನಗಳ ಹಿಂದೆ ಆಕಾರ್ ಪಟೇಲ್ ಬೆಂಗಳೂರಿನಿಂದ ಬೋಸ್ಟನ್ ಪ್ರಯಾಣ ಮಾಡಲು ಉದ್ದೇಶಿಸಿದ್ದರೂ, ಅವರನ್ನು ತಡೆಯಲಾಗಿತ್ತು.