Advertisement

ತಿವಾರಿ ಪ್ರಕರಣ: ಎಫ್ಐಆರ್‌ ದಾಖಲಿಸಿದ ಸಿಬಿಐ

12:42 PM Jun 17, 2017 | Team Udayavani |

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ರಾಜ್ಯ ಆಹಾರ ಇಲಾಖೆಯ ಆಯುಕ್ತರಾಗಿದ್ದ  ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವಿನ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಶುಕ್ರವಾರ ಕೊಲೆ ಪ್ರಕರಣ ಶಂಕೆಯ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. 

Advertisement

ಅನುರಾಗ್‌ ತಿವಾರಿ ಸಹೋದರ ಮಯಾಂಕ್‌ ತಿವಾರಿ ನೀಡಿದ ದೂರಿನ  ಅನ್ವಯ, ತಿವಾರಿ ಸಾವಿನ ಪ್ರಕರಣ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ 302ರ ಸೆಕ್ಷನ್‌ ಅಡಿ ಮೊಕದ್ದಮೆ ದಾಖಲಾಗಿದೆ. ದೆಹಲಿಯ ಸಿಬಿಐ ಘಟಕದ ಹೆಚ್ಚುವರಿ ಎಸ್ಪಿ ಸಂತೋಷ್‌ಕುಮಾರ್‌ಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ.

ಉತ್ತರಪ್ರದೇಶ ಹಾಗೂ ಕೇಂದ್ರಸರ್ಕಾರಗಳ ನಿರ್ದೇಶನದ ಮೇರೆಗೆ ತಿವಾರಿ ಸಾವಿನ ಬಗ್ಗೆ ತನಿಖೆ ಚುರುಕುಗೊಳಿಸಿದ್ದ ಸಿಬಿಐ , ತಿವಾರಿ ಕೊಲೆ ನಡೆದಿರಬಹುದು ಎಂದೂ ಶಂಕಿಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next