Advertisement

“ಸುಶಾಂತ್‌ ಸಾವಿನ ತನಿಖೆ ಸಿಬಿಐಗೆ ಅಗತ್ಯವಿಲ್ಲ’

05:11 PM Jul 19, 2020 | Suhan S |

ನಾಗಪುರ, ಜು. 18: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಪ್ರಕರಣವನ್ನು ನಿಭಾಯಿಸಲು ಮುಂಬಯಿ ಪೊಲೀಸರು ಸಮರ್ಥರಾಗಿರುವುದರಿಂದ ಈ ಬಗ್ಗೆ ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್ಮುಖ್‌ ಶುಕ್ರವಾರ ಹೇಳಿದ್ದಾರೆ.

Advertisement

ಈ ಪ್ರಕರಣದಲ್ಲಿ ಪೊಲೀಸರು ವ್ಯವಹಾರ ಪೈಪೋಟಿಯ ಕೋನವನ್ನು ತನಿಖೆ ಮಾಡುತ್ತಿದ್ದಾರೆ ಎಂದವರು ತಿಳಿಸಿದ್ದಾರೆ. ರಜಪೂತ್‌ (34) ಜೂ. 14 ರಂದು ಮುಂಬಯಿಯ ಬಾಂದ್ರಾ ಅಪಾರ್ಟ್‌ ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಹೇಳಿಕೊಂಡಿದ್ದಾರೆ. ನಟ ಖನ್ನತೆಗಾಗಿ ಔಷಧ  ಪಡೆಯುತ್ತಿದ್ದ ಎಂದು ಮುಂಬಯಿ ಪೊಲೀಸರು ತಮ್ಮ ಆರಂಭಿಕ ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ. ಸುಶಾಂತ್‌ ಅವರ ಅಭಿಮಾನಿಗಳು ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಬಯಸಿದ್ದು, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ.

ಗುರುವಾರ ಸುಶಾಂತ್‌ ಪ್ರಿಯತಮೆ, ನಟಿ ರಿಯಾ ಚಕ್ರವರ್ತಿ ಕೂಡ ಇದೇ ಕೋರಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮುಂದೆ ಇಟ್ಟಿದ್ದರು. ತನಗೆ ಸರಕಾರದ ಮೇಲೆ ಸಂಪೂರ್ಣ ನಂಬಿಕೆ ಇದ್ದರೂ, ಸಿಬಿಐ ತನಿಖೆಯು ಈ ಪ್ರಕರಣಕ್ಕೆ ನ್ಯಾಯ ಒದಗಿಸಲು ಸಹಾಯ ಮಾಡಲಿದೆ ಎಂದು ಚಕ್ರವರ್ತಿ ಹೇಳಿದ್ದಾರೆ.

ಪಿಟಿಐ ಜತೆಗೆ ಮಾತನಾಡಿದ ದೇಶ್ಮುಖ್‌ ಅವರು, ನಟನ ಸಾವಿನ ಬಗ್ಗೆ ಮುಂಬಯಿ ಪೊಲೀಸರು ವಿವರವಾದ ತನಿಖೆ ನಡೆಸುತ್ತಿದ್ದಾರೆ ಮತ್ತು ಸಂಬಂಧಪಟ್ಟ ಜನರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ನೀಡುವ ಅಗತ್ಯವಿಲ್ಲ. ನಮ್ಮ ಪೊಲೀಸ್‌ ಅಧಿಕಾರಿಗಳು ಸಮರ್ಥರಾಗಿದ್ದಾರೆ ಮತ್ತು ತನಿಖೆಯನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ನಾವು ವ್ಯವಹಾರ ಪೈಪೋಟಿಯ ಕೋನವನ್ನು ಕೂಡ ಪರಿಶೀಲಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next