ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಿಎಂ ಓಂಪ್ರಕಾಶ್ ಚೌಟಾಲಾಗೆ ದೆಹಲಿಯ ವಿಶೇಷ ಸಿಬಿಐ ಕೋರ್ಟ್ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಇದೆ ವೇಳೆ ಕೋರ್ಟ್ ಚೌಟಾಲಾ ಗೆ ಸೇರಿರುವ ನಾಲ್ಕು ಕಡೆಗಳಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶಿಸಿದೆ.
1993ರಿಂದ 2006ರವರೆಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿರುವ ಚೌಟಾಲಾ ಹಾಗೂ ಸಿಬಿಐ ಪರ ವಕೀಲರ ವಾದವನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಗುರುವಾರ ಆಲಿಸಿದರು. ಚೌಟಾಲಾ ಅವರ ವೈದ್ಯಕೀಯ ಸಮಸ್ಯೆ ಮತ್ತು ವೃದ್ಧಾಪ್ಯವನ್ನು ಉಲ್ಲೇಖಿಸಿ ಅವರಿಗೆ ಕನಿಷ್ಠ ಶಿಕ್ಷೆಯನ್ನು ನೀಡಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಲಾಗಿತ್ತು. ಸಿಬಿಐ, ಗರಿಷ್ಠ ಶಿಕ್ಷೆ ವಿಧಿಸುವಂತೆ ಕೋರಿ, ಇದು ಸಮಾಜಕ್ಕೆ ಸಂದೇಶವನ್ನು ನೀಡಬೇಕು ಎಂದು ಹೇಳಿತ್ತು.
ಇದನ್ನೂ ಓದಿ : ಬೆಂಗಳೂರು ಮೂಲ ಸೌಕರ್ಯ ನವೆಂಬರ್ ಹೊತ್ತಿಗೆ ಸರಿ ಪಡಿಸುತ್ತೇವೆ : ಸಿಎಂ
ಸಿಬಿಐ 2005 ರಲ್ಲಿ ಪ್ರಕರಣವನ್ನು ದಾಖಲಿಸಿತ್ತು ಮತ್ತು 1993 ಮತ್ತು 2006 ರ ನಡುವೆ ಅಕ್ರಮ ಆಸ್ತಿಯನ್ನು ಗಳಿಸಿದ ಆರೋಪದ ಮೇಲೆ ಮಾರ್ಚ್ 26, 2010 ರಂದು ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.