Advertisement

ಡಿಕೆಶಿಯನ್ನು ಬಗ್ಗಿಸಿದ್ದು ಸಿಬಿಐ: ಕಾಂಗ್ರೆಸ್‌ ನವರು ವಿಪಕ್ಷವಾಗಲೂ ಅಯೋಗ್ಯರು: ಈಶ್ವರಪ್ಪ

08:25 PM Oct 08, 2020 | Mithun PG |

ಕೊಪ್ಪಳ: ಡಿಕೆಶಿ ಅವರನ್ನು ಬಗ್ಗಿಸಿದ್ದು ಸಿಬಿಐ, ಬಿಜೆಪಿ ಪಕ್ಷವಲ್ಲ. ಹವಾಲದಲ್ಲಿ, ಕಪ್ಪುಹಣದಲ್ಲಿ ಸಿಕ್ಕು ಅವರು ಜೈಲಿಗೆ ಹೋಗಿ ಬಂದವರು. ಅಂತವರನ್ನು ಮೆರವಣಿಗೆ ಮಾಡಿದರು. ಅವರೇನು ಪಾಕಿಸ್ತಾನದ ವಿರುದ್ದ ಗೆದ್ದು ಬಂದಿದ್ದರೇ ? ಕಾಂಗ್ರೆಸ್ ಪಕ್ಷದವರು ವಿಪಕ್ಷವಾಗಲು ಅಯೋಗ್ಯರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೈ ನಾಯಕರ ವಿರುದ್ದ ಗುಡುಗಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಹಾಗೂ ಕಾರ್ಯಕ್ರಮದಲ್ಲಿ ಮಾತನಾಡಿ, ಡಿಕೆಶಿ ಅವರನ್ನು ಬಿಜೆಪಿ ಬಗ್ಗಿಸಿಲ್ಲ. ಅವರನ್ನು ಬಗ್ಗಿಸಿದ್ದು ಸಿಬಿಐ. ಹವಾಲದಲ್ಲಿ, ಕಪ್ಪು ಹಣದಲ್ಲಿ ಸಿಕ್ಕು ಅವರು ಜೈಲಿಗೆ ಹೋಗಿದ್ದರು. ಅವರಿಗಿನ್ನೂ ಬುದ್ದಿ ಬಂದಿಲ್ಲ ಎಂದರಲ್ಲದೇ, ಈ ಹಿಂದೆ ಜೈಲಿಗೆ ಹೋಗಿ ಬಂದ ಡಿಕೆಶಿಯನ್ನು ಮೆರವಣಿಗೆ ಮಾಡಿದರು. ಅವರೇನು ಪಾಕಿಸ್ತಾನದ ವಿರುದ್ಧ ಗೆದ್ದು ಬಂದಿದ್ದಾರಾ ? ಎಂದು ವ್ಯಂಗ್ಯವಾಡಿದರು. ವಿನಯ್ ಕುಲಕರ್ಣಿ ಮೇಲೆ ಸಿಬಿಐ ತನಿಖೆಯಾಗುತ್ತಿದೆ. ಹೇಗಾದರೂ ಮಾಡಿ ಬಿಜೆಪಿಗೆ ಬಂದರೆ ಸಿಬಿಐನಿಂದ ರಕ್ಷಣೆ ಪಡೆಯಬಹುದು ಎಂಬ ಕುತಂತ್ರ ಅವರು ಮಾಡಿರಬಹುದು. ಆದರೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಅವರನ್ನು ಸೇರಿಸಿಕೊಳ್ಳಲ್ಲ. ಒಂದು ವೇಳೆ ಸಿಬಿಐ ಕ್ಲೀನ್ ಚೀಟ್ ನೀಡಿದರೇ, ಆಗ ಅವರು ಬಿಜೆಪಿ ಸೇರಬೇಕೆಂದು ಇಚ್ಛೆಪಟ್ಟರೆ ಪಕ್ಷದ ಹಿರಿಯರು ಕುಳಿತು ಚರ್ಚೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ವಿಪಕ್ಷವಾಗಲು ಅಯೋಗ್ಯರು:

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಒಂದೂ ಕೋಮುಗಲಭೆ ಆಗಿಲ್ಲ. ಆದರೆ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಏನಾಗಿದೆ ಎನ್ನುವುದು ಜನತೆಗೆ ಗೊತ್ತಿದೆ. ಅಲ್ಲಿ ಮುಸ್ಲಿಂರನ್ನು ಎತ್ತಿಕಟ್ಟಿ ರಾಜಕಾರಣ ಮಾಡಲು ಕಾಂಗ್ರೆಸ್ ಹೊರಟಿತು. ಅವರು ವಿರೋಧ ಪಕ್ಷವಾಗಲು ಅಯೋಗ್ಯರು. ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಇದನ್ನು ಯಾರೂ ಒಪ್ಪಲ್ಲ ಎಂದು ಸಿದ್ದು, ಡಿಕೆಶಿ, ಪರಮೇಶ್ವರ ವಿರುದ್ದ ಗುಡುಗಿದರು.

ಇದನ್ನೂ ಓದಿ: ಏನಿದು ಟಿಆರ್‌ಪಿ ಪೈಪೋಟಿ? ನಾವು ತಿಳಿದಿರಬೇಕಾಗಿರುವುದೇನು? ಇಲ್ಲಿದೆ ಓದಿ

Advertisement

ಪಶ್ಚಿಮ ಬಂಗಾಳದಲ್ಲಿ ತೇಜಸ್ವಿ ಸೂರ್ಯ ಅವರ ಮೇಲೆ ಗೂಂಡಾಗಿರಿ ನಡೆಸಿದ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಬಿಜೆಪಿ ಬೆಳೆಯುತ್ತಿರುವ ರಾಜ್ಯದಲ್ಲಿ ಗೂಂಡಾಗಿರಿ ಮುಖಾಂತರ ಬಿಜೆಪಿ ಕಾರ್ಯಕರ್ತರನ್ನು ದ್ವಂಸ ಮಾಡುತ್ತೇವೆ ಎನ್ನುವುದು ಮಮತಾ ಬ್ಯಾನರ್ಜಿ ಅವರಿಗಿದ್ದರೆ ಅಲ್ಲಿಯೇ ನಾವು ಹೆಚ್ಚು ಬೆಳೆಯುತ್ತೇವೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕೆಂದರು.

ರಾಜ್ಯದಲ್ಲಿ ಯಾವುದೇ ಚುನಾವಣೆಯಾಗಲಿ ಬಿಜೆಪಿ ಗೆಲುವು ಎಂದರ್ಥ. ಇದಕ್ಕಿಂತ ಬೇರೆ ಚರ್ಚೆ ಮಾಡುವ ಅಗತ್ಯವಿಲ್ಲ. ಶಿಕ್ಷಕರ ಕ್ಷೇತ್ರದ ೪ ಕ್ಷೇತ್ರದಲ್ಲೂ ನಾವು ಗೆಲುವು ಸಾಧಿಸಲಿದ್ದೇವೆ. ಬಿಜೆಪಿ ಅಭ್ಯರ್ಥಿ ಎಂದರೆ ಅವರು ಪುಣ್ಯವಂತರು. ಮೊದಲೆಲ್ಲ ಬಿಜೆಪಿ ಅಭ್ಯರ್ಥಿಯು ಠೇವಣಿ ಕಳೆದುಕೊಳ್ಳುತ್ತಿದ್ದರು. ಈಗ ಪಕ್ಷ ಸಂಘಟನೆಯಾಗಿದೆ. ಎಲ್ಲೆಡೆಯೂ ನಾವು ಗೆಲುವು ಸಾಧಿಸುತ್ತೇವೆ ಎಂದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ ಸೇರಿ ಇತರರು ಇದ್ದರು

ಇದನ್ನೂ ಓದಿ:  ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತೆ…ಮೀನಿನಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಗೊತ್ತಾ!

Advertisement

Udayavani is now on Telegram. Click here to join our channel and stay updated with the latest news.

Next