Advertisement

ಸಿಬಿಐ ಸಾಫ್ಟ್ ವೇರ್‌ ಪ್ರೋಗ್ರಾಮರ್‌ ವಿರುದ್ಧ ಅಕ್ರಮ ಸಂಪತ್ತಿನ ಕೇಸು

05:04 PM May 17, 2018 | Team Udayavani |

ಹೊಸದಿಲ್ಲಿ : ತತ್ಕಾಲ್‌ ರೈಲ್ವೆ ಟಿಕೆಟ್‌ ರಿಸರ್ವೇಶನ್‌ ವ್ಯವಸ್ಥೆಯನ್ನು ಪ್ರವೇಶಿಸುವುದಕ್ಕೆ ಅಕ್ರಮ ಸಾಫ್ಟ್ ವೇರ್‌ ರೂಪಿಸಿ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ಸಿಬಿಐ ಪ್ರಧಾನ ಕಾರ್ಯಾಲಯದಲ್ಲಿ ಕೆಲಸ ಮಾಡಿಕೊಂಡಿದ್ದ ಸಹಾಯಕ ಪ್ರೋಗ್ರಾಮರ್‌ ಅಜಯ್‌ ಗರ್ಗ್‌ ವಿರುದ್ಧ ಇದೀಗ ಘೋಷಿತ ಆದಾಯಕಕ್ಕಿಂತ 96.09 ಲಕ್ಷ ರೂ. ಹೆಚ್ಚು ಸಂಪತ್ತನ್ನು  ಕಲೆ ಹಾಕಿರುವ ಸಂಬಂಧ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಜಯ್‌ ಗರ್ಗ್‌ನನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಂಧಿಸಲಾಗಿತ್ತು. ಆತ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಸಾಫ್ಟ್ ವೇರನ್ನು ಆಕ್ರಮವಾಗಿ ಕೋಡಿಂಗ್‌ ಮಾಡಿ ಮಾರಾಟ ಮಾಡಿ 2011ರಿಂದ 2017ರ ವರೆಗಿನ ಆರು ವರ್ಷಗಳ ತನ್ನ ಕಾರ್ಯಾವಧಿಯಲ್ಲಿ 1.46 ಕೋಟಿ ರೂ. ಅಕ್ರಮ ಸಂಪತ್ತನ್ನು ಕಲೆ ಹಾಕಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಜಯ್‌ ಗರ್ಗ್‌ 2007-11ರ ಅವಧಿಯಲ್ಲಿ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಮತ್ತು ಟೂರಿಸಂ ಕಾರ್ಪೊರೇಶನ್‌ ಲಿಮಿಟೆಡ್‌ನ‌ಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next