Advertisement

1993ರ ಬಾಂಬ್‌ ದಾಳಿ: 24ವರ್ಷ ಬಳಿಕ ಆರೋಪಿ ಸೆರೆ

02:54 PM Jan 06, 2018 | Team Udayavani |

ನವದೆಹಲಿ: 1993ರಲ್ಲಿ ಚೆನ್ನೈನಲ್ಲಿರುವ ಆರೆಸ್ಸೆಸ್‌ನ ಪ್ರಧಾನ ಕಚೇರಿಯಲ್ಲಿ ಬಾಂಬ್‌ ದಾಳಿ ನಡೆಸಿದ ಆರೋಪಿ ಮುಷ್ತಾಕ್‌ ಅಹ್ಮದ್‌(56)ನನ್ನು ಸಿಬಿಐ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಘಟನೆ ನಡೆದ 24 ವರ್ಷಗಳ ಬಳಿಕ ಮುಷ್ತಾಕ್‌ನನ್ನು ಸೆರೆಹಿಡಿಯಲಾಗಿದೆ. 

Advertisement

ಕಣ್ತಪ್ಪಿಸಿಕೊಂಡಿದ್ದ ಈತನನ್ನು ಶುಕ್ರವಾರ ಬೆಳಗ್ಗೆ ಚೆನ್ನೈನ ಹೊರವಲಯದಲ್ಲಿ ಬಂಧಿಸಲಾಯಿತು ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. 1993ರ ಆ.8ರಂದು ಚೆನ್ನೈನ ಬಹುಮಹಡಿ ಆರ್‌ಎಸ್‌ ಎಸ್‌ ಕಟ್ಟಡದ ಮೇಲೆ ಆರ್‌ಡಿಎಕ್ಸ್‌ ಮೂಲಕ ದಾಳಿ ನಡೆಸಲಾಗಿತ್ತು. ಈ ವೇಳೆ 11 ಮಂದಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next