Advertisement

ಜಡ್ಜ್ ಗಳ ಅವಹೇಳನ: ಸಿಬಿಐನಿಂದ ಐವರ ಬಂಧನ

07:42 PM Aug 08, 2021 | Team Udayavani |

ನವದೆಹಲಿ: ಜಡ್ಜ್ ಗಳ ವಿರುದ್ಧ ಅವಹೇಳನಕಾರಿ ಅಂಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಐವರನ್ನು ಬಂಧಿಸಿದೆ.

Advertisement

ಸುಪ್ರೀಂ ಕೋರ್ಟ್‌ ಹಾಗೂ ಆಂಧ್ರಪ್ರದೇಶ ಹೈಕೋರ್ಟ್‌ನ ಜಡ್ಜ್ ಗಳ ವಿರುದ್ಧ ಬಂಧಿತರು ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿದ್ದರು.

ಇತ್ತೀಚೆಗೆ ಧನ್‌ಬಾದ್‌ ಜಿಲ್ಲಾ ನ್ಯಾಯಾಧೀಶ ಉತ್ತಮ್‌ ಆನಂದ್‌ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ, ಜಡ್ಜ್ ಗಳಿಗೆ ಬೆದರಿಕೆ, ಅವಮಾನ ಮಾಡುವ ಅಂಶಗಳಿದ್ದರೂ, ಇಂಟೆಲಿಜೆನ್ಸ್‌ ಬ್ಯೂರೋ, ಸಿಬಿಐ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡ ಬಳಿಕ ನಡೆದ ಮೊದಲ ಕಠಿಣ ಕ್ರಮ ಇದಾಗಿದೆ.

ವೈ.ಎಸ್‌.ಆರ್‌.ಕಾಂಗ್ರೆಸ್‌ನ ಮುಖಂಡರಾಗಿರುವ ನದಿಗಮ್‌ ಸುರೇಶ್‌ ಮತ್ತು ಅಮಂಚಿ ಕೃಷ್ಣಮೋಹನ್‌ ಅವಮಾನಕರ ಅಂಶಗಳನ್ನು ಅಪ್‌ಲೋಡ್‌ ಮಾಡುವ ಪ್ರಕರಣದ ಹಿಂದಿನ ಸೂತ್ರಧಾರಿಗಳೆಂದು ಹೇಳಲಾಗುತ್ತಿದೆ. ಅವರಿಬ್ಬರನ್ನು ಈಗಾಗಲೇ ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next