ತಿರುವನಂತಪುರಂ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ವಿರುದ್ಧ ಕ್ರೈಂ ಬ್ರ್ಯಾಂಚ್ ಚಾರ್ಜ್‌ಶೀಟ್ ಸಲ್ಲಿಸಿದೆ.
2015ರಲ್ಲಿ ಏರ್ ಇಂಡಿಯಾ ಅಧಿಕಾರಿಯೊಬ್ಬರ ವಿರುದ್ಧ ಸುಳ್ಳು ಆರೋಪ ಮಾಡಿರುವ ವಿಚಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಸ್ವಪ್ನಾ ಸುರೇಶ್ ಏರ್ ಇಂಡಿಯಾ ಸ್ಟಾಟ್ಸ್‌ನ ಎಚ್‌ಆರ್ ಮ್ಯಾನೇಜರ್ ಆಗಿದ್ದ ಸಮಯದಲ್ಲಿ ಅಲ್ಲಿನ ಅಧಿಕಾರಿ ಎಲ್.ಎಸ್.ಸಿಬು ಎನ್ನುವವರು ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ ಎಂದು ದೂರಲಾಗಿತ್ತು.
ಅದಕ್ಕೆಂದು ಸ್ವಪ್ನಾ ಅವರು 16 ಮಹಿಳಾ ಸಿಬ್ಬಂದಿಯ ನಕಲಿ ಸಹಿ ಇರುವ ಪತ್ರವನ್ನೂ ಸಿದ್ಧಪಡಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
ಸ್ವಪ್ನಾ ಈ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದಾರೆ. ಏರ್‌ಇಂಡಿಯಾ ಸ್ಟಾಟ್ಸ್‌ನ ಮಾಜಿ ಉಪಾಧ್ಯಕ್ಷ ಬಿನೋದ್ ಜಾಕೋಬ್ ಸೇರಿ ಕೆಲ ಅಧಿಕಾರಿಗಳ ಹೆಸರು ಚಾರ್ಜ್‌ಶೀಟ್‌ನಲ್ಲಿದೆ.