Advertisement
ಸಮಸ್ಯೆಯನ್ನು ಹೇಗೆ ಎದುರಿಸುವುದು?– ತಜ್ಞರ ಪ್ರಕಾರ ಮಧ್ಯಾಹ್ನ 2ರ ಅಅನಂತರ ಕಡಿಮೆ ಚಹಾ, ಕಾಫಿ ಕುಡಿಯಬೇಕು. ಗಾಢ ನಿದ್ರೆಯ ಸ್ಥಿತಿಗೆ ಕೆಫೀನ್ ಪರಿಣಾಮ ಬೀರುತ್ತದೆ.
– ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ಸ್ಕ್ರೀನ್‌ನ ನಿರಂತರ ವೀಕ್ಷಣೆ ಮೆಲಟೋನಿನ್ ಎಂಬ ಹಾರ್ಮೋನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ರೆಪ್ಪೆಗಳ ಚಲನೆಯನ್ನೂ ಕೂಡ ಕಡಿಮೆ ಮಾಡುತ್ತದೆ.
– ನ್ಯಾಶನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಮಲಗುವ ಕೋಣೆಯ ಉಷ್ಣತೆಯು 16-19 ಡಿಗ್ರಿ ಸೆ. ನಡುವೆ ಇರಬೇಕು. ಇದು ನಿದ್ರೆ ಮಾಡಲು ಸೂಕ್ತವಾದ ತಾಪಮಾನ ಪ್ರಮಾಣವಾಗಿದೆ.
ಹೆಚ್ಚು ನಿದ್ರಾಹೀನತೆಯನ್ನು ಅನುಭವಿ ಸುತ್ತಿರುವವರಲ್ಲಿ ಯುವಜನರೇ ಹೆಚ್ಚು ಇದ್ದು, ಶೇ. 70ರಷ್ಟು ಯುವಕರು ನಿದ್ದೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ರೋಗದ ಹೆಸರು?
ಪ್ರಪಂಚದಾದ್ಯಂತದ ನಿದ್ರಾ ನರಶಾಸ್ತ್ರಜ್ಞರು ಇದಕ್ಕೆ “ಕೋವಿಡೋಸೋಮ್ನಿಯಾ’ ಎಂದು ಹೆಸರಿಸಿ¨ªಾರೆ. ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಕಾರ, ಕೊರೊನಾ ವೈರಸ್ ಸೋಂಕಿಗೆ ಒಳಗಾಗುವ ಭಯ, ಕುಟುಂಬ ಸದಸ್ಯರ ಬಗ್ಗೆ ಕಾಳಜಿಯಿಂದ ಇದು ಹೆಚ್ಚಾಗಿದೆ.
Related Articles
ಕೊರೊನಾದಿಂದ ಒತ್ತಡ ಹೆಚ್ಚಾಗಿದೆ. ಈ ಒತ್ತಡದಿಂದಾಗಿ ಜನರು ನಿದ್ರಾಹೀನತೆಗೆ ಬಲಿಯಾಗುತ್ತಿ¨ªಾರೆ. 2020ರ ಆಗಸ್ಟ್‌ನಲ್ಲಿ ಯುಕೆಯ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ಸಂಶೋಧನೆಯು ಲಾಕ್‌ಡೌನ್ ಸಮಯದಲ್ಲಿ ಚೀನದಲ್ಲಿ ನಿದ್ರಾಹೀನತೆಯ ಪ್ರಮಾಣ ಶೇ. 14.6ರಿಂದ ಶೇ. 20ಕ್ಕೆ ಏರಿದೆ ಎಂದು ತಿಳಿಸಿದೆ. ಇಟಲಿ ಮತ್ತು ಗ್ರೀಸ್‌ನಲ್ಲಿ ಈ ದರವು ಶೇ. 40ರ ವರೆಗೆ ಕಂಡುಬಂದಿದೆ.
Advertisement
ಏನಿದರ ಲಕ್ಷಣಗಳು?ನಿದ್ರೆಯ ಕೊರತೆ ಅಥವಾ ಆಗಾಗ್ಗೆ ಎಚ್ಚರವಾಗುವುದು. ಹಗಲಿನಲ್ಲಿ ದಣಿದ ಅಥವಾ ನಿದ್ರೆಯ ಭಾವನೆ. ನಿ¨ªೆ ಮಾಡುವಾಗ ಮತ್ತೆ ಮತ್ತೆ ಎದ್ದೇಳುವುದು ಅಥವಾ ತಡವಾದ ನಿದ್ರೆಯನ್ನೂ ಕೋವಿಡೋಸೋಮ್ನಿಯಾ ಎಂದು ಕರೆಯಲಾಗುತ್ತದೆ. ನಿದ್ರಾಹೀನತೆಯ ಅಪಾಯ ಏನು?
ಹೃದಯಾಘಾತ: ನಿದ್ರೆ ಪೂರ್ಣಗೊಳ್ಳದಿದ್ದಾಗ ರಕ್ತದೊತ್ತಡ ದೀರ್ಘಕಾಲದವರೆಗೆ ಇರುತ್ತದೆ. ರಕ್ತದೊತ್ತಡದ ಈ ಹೆಚ್ಚಳವು ಹೃದ್ರೋಗಗಳಿಗೆ ಪ್ರಮುಖ ಕಾರಣವಾಗಿದೆ. ಬೊಜ್ಜು: ಲೆಪ್ಟಿನ್ ಮತ್ತು ಗ್ರೆಲಿನ್ ಎಂಬ ಎರಡು ಹಾರ್ಮೋನುಗಳು ಹಸಿವನ್ನು ನಿಯಂತ್ರಿಸುತ್ತವೆ. ನಿದ್ರೆ ಪೂರ್ಣಗೊಳ್ಳದಿದ್ದಾಗ, ಈ ಹಾರ್ಮೋನುಗಳ ಅಸಮತೋಲನದಿಂದಾಗಿ ಹಸಿವು ಹೆಚ್ಚಾಗಿ ಬೊಜ್ಜು ಬರುವ ಸಾಧ್ಯತೆ ಅಧಿಕವಾಗಿದೆ. ಟೈಪ್ -2 ಡಯಾಬಿಟಿಸ್: ಮಧುಮೇಹ / ಚಯಾಪಚಯ ಕ್ರಿಯೆಯ ಮೇಲೆ ನಡೆದ ಸಂಶೋಧನೆಯ ಪ್ರಕಾರ ನಿದ್ರಾಹೀನತೆಯ ಸಂದರ್ಭದಲ್ಲಿ ಮನುಷ್ಯನು ನಿರಂತರವಾಗಿ ಒತ್ತಡದಲ್ಲಿರುವುದು ಕಂಡುಬಂದಿದೆ. ಒತ್ತಡವು ಮಧುಮೇಹ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಲ್ಲೊಂದಾಗಿದೆ.