Advertisement

ಗುಹೆವಾಸ ಸಾಕ್ಷ್ಯಚಿತ್ರ 20ರಂದು ಪ್ರಸಾರ

06:00 AM Jul 17, 2018 | Team Udayavani |

ನವದೆಹಲಿ: ಥಾಯ್ಲೆಂಡ್‌ ಗುಹೆಯಲ್ಲಿ ಸಿಲುಕಿಕೊಂಡ ಕಿರಿಯ ಫ‌ುಟ್‌ಬಾಲ್‌ ಆಟಗಾರರ ರಕ್ಷಣೆಯ ಕ್ಷಣಕ್ಷಣಗಳನ್ನು ಇಟ್ಟುಕೊಂಡು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಡಿಸ್ಕವರಿ ಮುಂದಾಗಿದೆ. ರಕ್ಷಣಾ ಕಾರ್ಯಾಚರಣೆಯ ರೋಚಕ ಕ್ಷಣಗಳೇ ಈ ಸಾಕ್ಷ್ಯಚಿತ್ರದ ಆಕರ್ಷಣೆಯಾಗಿರಲಿದೆ. ಅಷ್ಟಕ್ಕೂ, ಈ ಕಿರುಚಿತ್ರ ಜುಲೈ 20, ಶುಕ್ರವಾರ ಬೆಳಗ್ಗೆ 9.00 ಗಂಟೆಗೆ ಪ್ರಸಾರವಾಗಲಿದೆ. ಒಂದು ಗಂಟೆಯ ಸಾಕ್ಷ್ಯಚಿತ್ರ ಇದಾಗಿದ್ದು, ಡಿಸ್ಕವರಿ ಚಾನಲ್‌, ಡಿಸ್ಕವರಿ ಎಚ್‌ಡಿ ವರ್ಲ್ಡ್, ಡಿಸ್ಕವರಿ ಟಬೊì ಮತ್ತು ಡಿಸ್ಕವರಿ ಸೈನ್ಸ್‌ ಚಾನೆಲ್‌ಗ‌ಳಲ್ಲಿ ಪ್ರಸಾರವಾಗಲಿದೆ. 11-16 ವರ್ಷದೊಳಗಿನ ಮಕ್ಕಳು ತಮ್ಮ ಕೋಚ್‌ ಮಾರ್ಗದರ್ಶನದಂತೆ ಗುಹೆ ಪ್ರವೇಶಿಸಿದ್ದರು. ದುರದೃಷ್ಟವಶಾತ್‌ ಗುಹೆ ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next