Advertisement

I.N.D.I.A ಬಲಪಡಿಸಲು ಕಾವೇರಿ ನೀರು ಬಿಡುಗಡೆ: ಬಿಎಸ್‌ವೈ

11:08 PM Sep 15, 2023 | Team Udayavani |

ಬೆಂಗಳೂರು: ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಇರುವುದರಿಂದ ಐಎನ್‌ಡಿಐಎ ಒಕ್ಕೂಟವನ್ನು ಬಲಪಡಿಸಲು ನಿತ್ಯ 5 ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗು ತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

Advertisement

ಶುಕ್ರವಾರ ಪಕ್ಷದ ಕಚೇರಿ ಯಲ್ಲಿ ಕಾವೇರಿ ಕೊಳ್ಳದ ಬಿಜೆಪಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡುವ ಬದಲು ತಮಿಳುನಾಡಿಗೆ ನೀರು ಬಿಡುತ್ತಿದೆ. ಇದನ್ನು ತತ್‌ಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಕಾವೇರಿ ಜನಜಾಗೃತಿ ಯಾತ್ರೆ
ಬಸವರಾಜ ಬೊಮ್ಮಾಯಿ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿ ಕಾವೇರಿ ಜನಜಾಗೃತಿ ಯಾತ್ರೆ ನಡೆಸುತ್ತೇವೆ. ಸೆ.21ರಂದು ಸಮರ್ಥ ವಾದ ಮಂಡಿಸಿ, ರಾಜ್ಯದ ರೈತರ ಪರವಾಗಿ ಸರಕಾರ ನಿಲ್ಲಬೇಕು. ನೀರು ನಿಲ್ಲಿಸುವ ನಿರ್ಧಾರ ಕೈಗೊಂಡರೆ ನಾವೆಲ್ಲರೂ ಸರಕಾರದ ಪರ ನಿಲ್ಲುತ್ತೇವೆ ಎಂದು ಹೇಳಿದರು.

ಡಿಕೆಶಿ ವಕೀಲರೇಕೆ ವಾದ ಮಾಡಬಾರದು?
ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಅನೇಕ ಹಿರಿಯ ವಕೀಲರ ಪರಿಚಯವಿದೆ. ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾದ ಮಂಡಿಸಿ ಯಶಸ್ವಿಯೂ ಆಗುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಅದೇ ವಕೀಲರ ತಂಡ ಅಥವಾ ಬೇರೆ ವಕೀಲರ ತಂಡವನ್ನೇಕೆ ನೇಮಿಸಬಾರದು? ಇದು ನನ್ನ ವೈಯಕ್ತಿಕ ಸಲಹೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next