Advertisement
ಜುಲೈ 28ಕ್ಕೆ ಬಿಳಿಗುಂಡ್ಲುವಿನಲ್ಲಿ ಜುಲೈ ಅಂತ್ಯಕ್ಕೆ ನಿಗದಿಪಡಿಸಿದ 40.43 ಟಿಎಂಸಿಗಿಂತ ಹೆಚ್ಚುವರಿಯಾಗಿ 36.34 ಟಿಎಂಸಿ ನೀರು ಹರಿದಿದೆ. ಜುಲೈ 29ರ ಮಾಪನದ 1,08,876 ಕ್ಯೂಸೆಕ್ಸ್ ಹರಿವನ್ನು ಪರಿಗಣನೆಗೆ ತೆಗುದುಕೊಂಡರೆ ಒಟ್ಟು 9.40 ಟಿಎಂಸಿ ಆಗುತ್ತದೆ. ಒಟ್ಟಾರೆಯಾಗಿ, ತಮಿಳುನಾಡಿನ ಬಿಳಿಗುಂಡ್ಲುವಿನಲ್ಲಿ ಜುಲೈ 29ಕ್ಕೆ 86.17 ಟಿಎಂಸಿ ನೀರು ಸೇರಿದೆ. ಈ ಒಟ್ಟಾರೆ ನೀರಿನ ಮೊತ್ತವು ಆಗಸ್ಟ್ ಅಂತ್ಯಕ್ಕೆ ಬಿಡಬೇಕಾದ ನೀರಿನ ಪ್ರಮಾಣದಷ್ಟಾಗಿದೆ ಎಂದು ಮಾಹಿತಿ ನೀಡಿತು.
Related Articles
Advertisement
ಸಮಿತಿಯ ತೀರ್ಮಾನ ಏನು?
ಕರ್ನಾಟಕದ ಮಾಹಿತಿ ಮತ್ತು ತಮಿಳುನಾಡಿನ ಕೋರಿಕೆ ಆಲಿಸಿದ ಕಾವೇರಿ ನೀರು ನಿಯಂತ್ರಣಾ ಸಮಿತಿಯು, ಸದ್ಯಕ್ಕೆ ಬಿಳಿಗುಂಡ್ಲುವಿನ ಹರಿವಿನಲ್ಲಿ ಯಾವುದೇ ಆತಂಕ ಇಲ್ಲ. ಹರಿವು ಸಾಮಾನ್ಯವಾಗಿರುವುದರಿಂದ ಸಮಿತಿಯ ಮುಂದಿನ ತಿಂಗಳ ಸಭೆಯಲ್ಲಿ ಹರಿವಿನ ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕಿಸಿ ತೀರ್ಮಾನಿಸಲಾಗುವುದು ಎಂದು ಸೂಚಿಸಿತು.