ರಾಮನಗರ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗಲು ರಾಜ್ಯ ಸರ್ಕಾರದ ಬೇಜವಾಬ್ದಾರಿ ತನವೇ ಕಾರಣ ಎಂದು ಮಾಜಿ ಸಿಎಂ ಎಚ್ ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗೋಷ್ಟಿನಡೆಸಿದ ಅವರು ,ಕಾವೇರಿ ನೀರು ನಿರ್ವಹಣಾ ಮಂಡಳಿಗೆ ವಾಸ್ತವಾಂಶ ತಿಳಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ.
5 ಸಾವಿರ ಕ್ಯುಸೆಕ್ಸ್ ನೀರನ್ನು ಮತ್ತೆ ಬಿಡಿ ಎಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಹೇಳಿದೆ. ನೀರು ಎಲ್ಲಿಂದ ಬಿಡಲು ಸಾಧ್ಯ.ಸಿಡಬ್ಲುಎಂಎ ಅಧಿಕಾರಿಗಳು ವಾಸ್ತವಾಂಶ ನೋಡದೆ ಎಸಿ ರೂಂ ನಲ್ಲಿ ಕುಳಿತು ನೀರು ಬಿಡಿ ಎನ್ನುತ್ತಿದ್ದಾರೆ.
ಅವರೇನು ಮೇಲಿಂದ ಬಂದ ಬ್ರಹ್ಮನಾ.. ಯಾಕೆ ನಮ್ಮ ರಾಜ್ಯದವರು ಬಿಡಬೇಕಿತ್ತು ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನವಾಗುವ ವರೆಗೆ ಕಾಯ್ದು ನೋಡಬೇಕಿತ್ತು.
ಕಾವೇರಿ ನೀರುನಿರ್ವಹಣಾ ಮಂಡಳಿ ಸಭೆಗೆ ರಾಜ್ಯದ ನೀರಾವರಿ ಅಧಿಕಾರಿಗಳು ಪಾಲ್ಗೊಳ್ಳುತ್ತಿಲ್ಲ. ಇವರ ಉದಾಸೀನದಿಂದ ನಮಗೆ ಹಿನ್ನಡೆಯಾಗುತ್ತಿದೆ. ಆದರೆ ತಮಿಳುನಾಡಿನ ಅಧಿಕಾರಿಗಳು 10ರಿಂದ 15 ಮಂದಿ ಪಾಲ್ಗೊಂಡರೆ ನಮ್ಮ ರಾಜ್ಯದಲ್ಲಿಕೆಳಹಂತದ ಇಬ್ಬರು ಮೂವರು ಅಧಿಕಾರಿಗಳನ್ನ ಕಳುಹಿಸುತ್ತಾರೆ.
ರಾಜ್ಯದ 195 ತಾಲೂಕು ಬರಪೀಡಿತವಾಗಿವೆ, ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಕೇವಲ 50 ಟಿಎಂಸಿಯಷ್ಟು ನೀರು ಸಂಗ್ರಹ ವಿದೆ ಇನ್ನು 6ತಿಂಗಳು ಕುಡಿಯುವ ನೀರಿಗೆ ಏನು ಮಾಡುವುದು ಎಂದು ಪ್ರಶ್ನಿಸಿದರು.