Advertisement

Cauvery issue; ಕೇಂದ್ರ ಸರ್ಕಾರವು ರಾಜ್ಯದ ರೈತರ ಪರವಿದೆ: ಶೋಭಾ ಕರಂದ್ಲಾಜೆ

10:31 AM Sep 26, 2023 | Team Udayavani |

ಮೈಸೂರು: ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಕಾವೇರಿ ನೀರು ಹಂಚಿಕೆ ವಿವಾದ ಉದ್ಭವವಾಗಿದೆ. ಆದರೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯು ರಾಜ್ಯದ ಕನ್ನಡಪರ ಸಂಘಟನೆ, ರೈತರ ಜೊತೆಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಾಯಕರು ಅವರವರ ಹೊಡೆದಾಟದಲ್ಲಿ ಮುಳುಗಿದ್ದಾರೆ. ಅವರು ತಮಿಳುನಾಡನ್ನು ಓಲೈಸಿಕೊಳ್ಳಲು ಮುಂದಾಗಿರಬೇಕು, ಸರಿಯಾದ ಕಾವೇರಿ ಕೊಳ್ಳದ ಅಧ್ಯಯನ ಮಾಡದೇ ಇರಬಹುದು, ಈ ಕಾರಣದಿಂದಲೇ ಸರ್ಕಾರ ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ನ್ಯಾಯಾಲಯಕ್ಕೆ ಅಂಕಿ ಅಂಶ ನೀಡಿಲ್ಲ. ಇದರ ಬದಲು ಪ್ರಧಾನಿಯನ್ನು ದೂರುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪ್ರಧಾನಿ ಕೇವಲ ತಮಿಳುನಾಡು ಕರ್ನಾಟಕಕ್ಕೆ ಅಲ್ಲ. ಬೇರೆ ರಾಜ್ಯದ ಜಲ ವಿವಾದ ಸಹಾ ಪಿಎಂ ಬಗೆಹರಿಸಬೇಕಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯದ ಕನ್ನಡಪರ ಸಂಘಟನೆ, ರೈತರ ಜೊತೆಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಆಸ್ತಿ ಪಾಸ್ತಿ ಹಾನಿ ಮಾಡಿದರೆ ನಮಗೆ ನಷ್ಟ. ಒಮ್ಮೆ ತಮಿಳುನಾಡಿಗೆ ನೀರು ಹರಿಸಿದ ಮೇಲೆ ಅವರಿಗೆ ಹೆಚ್ಚಾದರೂ ವಾಪಸ್ಸು ಪಡೆಯಲು ಸಾಧ್ಯವಿಲ್ಲ. ತಮಿಳುನಾಡು ಆರಾಮವಾಗಿ ನೀರನ್ನು ಬಳಸಿಕೊಳ್ಳುತ್ತಿದೆ. ನಾನು ಸಿಎಂ ಡಿಸಿಎಂ ದೆಹಲಿಗೆ ಬಂದಾಗಲೂ ಯಾಕೆ ನೀವು ಸರಿಯಾದ ಮಾಹಿತಿ ನ್ಯಾಯಾಲಯ ಪ್ರಾಧಿಕಾರಕ್ಕೆ‌ ಕೊಟ್ಟಿಲ್ಲವೆಂದು ಕೇಳಿದ್ದೆ. ದೆಹಲಿಯಿಂದ ತಮಿಳುನಾಡು ಕರ್ನಾಟಕಕ್ಕೆ ನಿಯೋಗ ಕಳುಹಿಸಿಲು ನಾವು ಮನವಿ ಮಾಡಿದ್ದೇವೆ. ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next