Advertisement
2015-16, 2016 -17ನೇ ಸಾಲಿನಲ್ಲಿ ಸತತ ಬರಗಾಲದಿಂದ ಕಂಗೆಟ್ಟ ಸಂಕಷ್ಟ ಪರಿಸ್ಥಿತಿಯಲ್ಲಿ ಕಾವೇರಿ ನೀರನ್ನು ಬಿಟ್ಟ ಸರ್ಕಾರದ ಧೋರಣೆ ಖಂಡಿಸಿ ಬೀದಿಗಿಳಿದು ಹೋರಾಟ ನಡೆಸಿದ ಕಾವೇರಿ ಹಾಗೂ ಕನ್ನಡ ಪರ ಸಂಘಟನೆಗಳ ಹೋರಾಟಗಾರರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳಿಗೆ ಸರ್ಕಾರವೇ ಮರುಜೀವ ಕೊಡುತ್ತಿದೆ. ಕಾವೇರಿ ಹೋರಾಟಗಾರರ ವಿರುದ್ಧ 2012ಕ್ಕೂ ಮೊದಲು ಇದ್ದ ಎಲ್ಲ ಮೊಕದ್ದಮೆಗಳನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಆದರೆ, 2012ರ ನಂತರದ ಕಾವೇರಿ ಪ್ರತಿಭಟನೆಗಳ ಪ್ರಕರಣಗಳಿಗೆ ಜೀವ ಕೊಡುವುದರೊಂದಿಗೆ ಹೋರಾಟಗಾರರನ್ನುಬಂಧಿಸುವ ಬಗ್ಗೆ ಚಿಂತನೆಗಳು ಸರ್ಕಾರದ ವಲಯಗಳಲ್ಲಿ ಆರಂಭವಾಗಿವೆ.
ದಾಖಲಾಗಿವೆ. 60 ಪ್ರಕರಣಗಳಿಗೆ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗದಿರುವ ಹೋರಾಟಗಾರರಿಗೆ ವಾರೆಂಟ್ ಜಾರಿಗೊಳಿಸಲಾಗಿದೆ. ಹೋರಾಟಗಾರರು ರೌಡಿಶೀಟರ್ ಪಟ್ಟಿಗೆ?:
ಕಾವೇರಿ ಗಲಾಟೆ ವೇಳೆಯಲ್ಲಿ ಪಾಂಡವಪುರದಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಪಾಲ್ಗೊಂಡಿದ್ದರೆಂದು ಹೇಳಲಾದ ಕೆಲವರ ವಿರುದ್ಧ ರೌಡಿಶೀಟರ್ ಎಂದು ಗುರುತಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ವ್ಯಕ್ತಿಗಳನ್ನು ಬುಧವಾರ ಪಾಂಡವಪುರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಈ ನಡುವೆ ಸರ್ಕಾರ 2012ರ ನಂತರ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಹೋರಾಟ ಗಾರರ
ವಿರುದ್ಧ ಹೂಡಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಜಿಲ್ಲಾ ಪೊಲೀಸರಿಂದ ಮಾಹಿತಿ ಪಡೆದು ಕೊಂಡಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ರೈತರ ಮೇಲಿನ ಪ್ರಕರಣಗಳು ಈಗಲೂ ಮುಂದುವರಿದಿವೆ.