Advertisement

ಕಾವೇರಿ ನೃತ್ಯ ತಂಡಕ್ಕೆ ಸಮಗ್ರ ಪ್ರಶಸ್ತಿ

01:51 PM Jun 15, 2018 | Team Udayavani |

ಹುಣಸೂರು: ಕರ್ನಾಟಕ ನ್ಪೋಟ್ಸ್‌ ಡ್ಯಾನ್ಸ್‌ ಅಸೋಷಿಯೇಷನ್‌ ಪ್ರಾಯೋಜಕತ್ವದಡಿ ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದ ವಿವಿಧ ನೃತ್ಯ ಸ್ಪರ್ಧೆಗಳಲ್ಲಿ ಹುಣಸೂರಿನ ಕಾವೇರಿ ಎಕ್ಸ್‌ಪ್ರೆಸ್‌ ಡ್ಯಾನ್ಸ್‌ ಅಕಾಡೆಮಿ ನೃತ್ಯ ತಂಡ ಸಮಗ್ರ ಚಾಂಪಿಯನ್‌ ಶಿಪ್‌ ಪಡೆದುಕೊಂಡಿದೆ. 

Advertisement

ಮೈಸೂರಿನ ಟೆರೇಷಿಯನ್‌ ಕಾಲೇಜಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ನ್ಪೋರ್ಟ್ಸ್-ಡ್ಯಾನ್ಸ್‌ ಚಾಂಪಿಯನ್‌ಶಿಪ್‌-2018-19ರ ಸ್ಪರ್ಧೆಗಳಲ್ಲಿ ಡ್ಯಾನ್ಸ್‌ ಅಕಾಡೆಮಿಯ 14 ಮಂದಿ ನೃತ್ಯಪಟುಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ಅಕಾಡೆಮಿಯ ಮುಖ್ಯಸ್ಥ ಬನ್ನಿಕುಪ್ಪೆ ಮಹದೇವಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೂನಿಯರ್‌ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ತಂಡ ಹಾಗೂ ಜಾನಪದ ವಿಭಾಗದ ಇಬ್ಬರು ಸ್ಪರ್ಧಿಗಳು ನಡೆಸುವ ನೃತ್ಯ ವಿಭಾಗದ 14 ವರ್ಷ ವಯೋಮಾನದ ಸ್ಪರ್ಧಿಗಳ ಪೈಕಿ ಅಕಾಡೆಮಿಯ ಅನಿಲ್‌ ಮತ್ತು ದೀûಾ ಜೋಡಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನಗಳಿಸಿದೆ. 12 ವರ್ಷದೊಳಗಿನ ವಿಭಾಗದಲ್ಲಿ ಚೈ‌ನ್ಯ ಹಾಗೂ ಸತ್ಯ ಬೆಳ್ಳಿ ಪದಕ ಪಡೆದಿದ್ದಾರೆ.

ಸೋಲೋ(ಪಾಶ್ಚಾತ್ಯ ನೃತ್ಯ) ಡ್ಯಾನ್ಸ್‌ ವಿಭಾಗದಲ್ಲಿ ಅನಿಲ್‌ ಚಿನ್ನ ಮತ್ತು ದೀûಾ ಬೆಳ್ಳಿ ಪದಕ ಗಳಿಸಿದ್ದರೆ, 19 ವರ್ಷ ವಯೋಮಾನದ ವಿಭಾಗದಲ್ಲಿ ಶಂಕರ್‌ ಬೆಳ್ಳಿಪದಕ ಗಿಟ್ಟಿಸಿಕೊಂಡಿದ್ದಾರೆ. 12 ವರ್ಷದ ವಿಭಾಗದಲ್ಲಿ ಚೈತನ್ಯ ಹಾಗೂ ಸತ್ಯ ಕಂಚಿನ ಪದಕ ಗಳಿಸಿದ್ದಾರೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next