Advertisement

ಗಂಗೆಗಿಂತ ಕಾವೇರಿಯೇ ವಿಷಕಾರಿ?

06:00 AM Dec 24, 2017 | Team Udayavani |

ಚೆನ್ನೈ: ದೇಶದ ಪವಿತ್ರ ನದಿ ಗಂಗೆಯಷ್ಟು ಮಲಿನ ಮತ್ತು ವಿಷಕಾರಿ ಅಂಶಗಳಿರುವ ನದಿ ಬೇರೊಂದಿಲ್ಲ ಎಂದು ಈವರೆಗೆ ಉದಾಹರಿಸಲಾಗುತ್ತಿತ್ತು. ಆದರೆ, ಅರಗಿಸಿಕೊಳ್ಳಲಾಗದ ಸತ್ಯವೊಂದು ಈಗ ಹೊರ ಬಿದ್ದಿದೆ. 

Advertisement

ಕರ್ನಾಟಕದ ಜೀವ ನದಿ ಕಾವೇರಿ ಗಂಗಾ ನದಿಗಿಂತ ಶೇ.600ರಷ್ಟು ಅಧಿಕ ಪ್ರಮಾಣದಲ್ಲಿ ಹೆಚ್ಚಿನ ವಿಷಕಾರಿ ರಾಸಾಯನಿಕ ತ್ಯಾಜ್ಯಗಳನ್ನು ಹೊಂದಿದೆ ಎಂಬ ಅಂಶ ಗೊತ್ತಾಗಿದೆ. ಪ್ರತಿ ವರ್ಷ ಅದಕ್ಕೆ 8.3 ಕ್ಯೂಬಿಕ್‌ ಕಿಮೀ ಪ್ರಮಾಣದಲ್ಲಿ ತ್ಯಾಜ್ಯ ಸೇರಿಕೊಳ್ಳುತ್ತದೆ ಎಂದು ಅಣ್ಣಾ ವಿವಿ ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಪ್ರತಿ ಲೀಟರ್‌ಗೆ 753 ಮಿಲಿ ಗ್ರಾಂನಷ್ಟು ತ್ಯಾಜ್ಯ ಜೀವ ನದಿಗೆ ಸೇರಿಕೊಳ್ಳುತ್ತದೆ. ಅಂದರೆ ಗಂಗಾ ನದಿಗೆ ಸೇರಿಕೊಳ್ಳುವ ತ್ಯಾಜ್ಯದ ಐದು ಪಟ್ಟು ಹೆಚ್ಚು ಎನ್ನುವುದು ಗಮನಾರ್ಹ. ಡಿ.9ರಂದು ವಿವಿ ಬಿಡುಗಡೆ ಮಾಡಿರುವ ಅಧ್ಯಯನದ ಅಂಶಗಳನ್ನು ಉಲ್ಲೇಖೀಸಿ “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

ಕರ್ನಾಟಕದ ಮೇಕೆದಾಟು, ರುದ್ರಪಟ್ಟಣ, ತಮಿಳುನಾಡಿನ ಶ್ರೀರಾಮ ಸಮುದ್ರಂ, ಕಂಡಿಯೂರ್‌, ಅಪ್ಪಕುಡತ್ತಾನ್‌, ಪನ್ನವಾಡಿಗಳಲ್ಲಿ ಅಂತರ್ಜಲ ಕಲುಷಿತವಾಗಿದೆ ಎಂಬ ವರದಿಗಳ ಬೆನ್ನಲ್ಲೇ ಈ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಈ ಪ್ರದೇಶಗಳ ನೀರು ಕುಡಿಯುವ ಉಪಯೋಗಕ್ಕೂ ಲಭ್ಯವಿಲ್ಲದಂತಾಗಿದೆ. ಜವಳಿ, ಸಿಮೆಂಟ್‌, ಡೈಯಿಂಗ್‌ ಮತ್ತು ರಾಸಾಯನಿಕ ಕಾರ್ಖಾನೆಗಳು ನದಿ ತಟದಲ್ಲೇ ಸ್ಥಾಪನೆಯಾಗಿ, ತ್ಯಾಜ್ಯಗಳನ್ನು ಅದಕ್ಕೆ ಬಿಡುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಅಧ್ಯಯದಲ್ಲಿ ಗೊತ್ತಾಗಿದೆ. ಈ ಬಗ್ಗೆ ಮಾತನಾಡಿದ ಅಧ್ಯಯನ ತಂಡದ ಮುಖ್ಯಸ್ಥ  ಎಲ್‌.ಇಲಾಂಗೋ “ಸೋಡಿಯಂ ಮತ್ತು ಕ್ಲೋರೈಡ್‌ ಕಾವೇರಿ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಕೈಗಾರಿಕಾ ಸ್ಥಾವರಗಳು ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆಯೋ ಆ ಪರಿಸರದಲ್ಲಿ ಈ ಅಂಶ ಹೆಚ್ಚಾಗಿ ಕಂಡು ಬಂದಿದೆ. ಇತರ ನದಿ ಮೂಲದ ಪರಿಸರದ ಮೇಲೆ ಅಧ್ಯಯನ ನಡೆಸಿದ ವೇಳೆ ಈ ಅಂಶ ಗೊತ್ತಾಗಿದೆ.’ ಎಂದಿದ್ದಾರೆ.

ದುಷ್ಪರಿಣಾಮವೇನು?: ನೀರಿನಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್‌), ಸಂತಾನೋತ್ಪತ್ತಿ ಮೇಲೆ ಪ್ರತಿಕಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಅಣ್ಣಾ ವಿವಿ ಅಧ್ಯಯನದಲ್ಲಿ ಏನಿದೆ?
ನದಿ ಹೆಸರು     ಬಿಡಲಾಗಿರುವ ಒಟ್ಟು ತ್ಯಾಜ್ಯ                  ತ್ಯಾಜ್ಯ ಪ್ರಮಾಣ
(ಟಿಡಿಎಸ್‌ ಪ್ರತಿ ಲೀಟರ್‌ಗೆ ಮಿಲಿಗ್ರಾಂ)    (ಪ್ರತಿ ವರ್ಷಕ್ಕೆ ಕ್ಯೂಬಿಕ್‌ ಕಿಮೀ)
ಕಾವೇರಿ            753                                                8
ಗಂಗಾ              130                                                493
ಕೃಷ್ಣಾ               320                                                30
ಗೋದಾವರಿ       200                                               105

Advertisement
Advertisement

Udayavani is now on Telegram. Click here to join our channel and stay updated with the latest news.

Next