Advertisement

ಇಸ್ರೇಲ್‌ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನಾ ರ‍್ಯಾಲಿ

09:11 PM Feb 12, 2023 | Team Udayavani |

ಟೆಲ್‌ ಅವಿವ್‌: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನೇತೃತ್ವದ ಸರ್ಕಾರದ ಯೋಜಿತ ನೂತನ ನೀತಿಗಳು ನ್ಯಾಯಾಂಗವನ್ನು ದುರ್ಬಲಪಡಿಸಲಿದೆ ಎಂದು ಆರೋಪಿಸಿ ರಾಜಧಾನಿ ಟೆಲ್‌ ಅವಿವ್‌ ಸೇರಿದಂತೆ ಅನೇಕ ನಗರಗಳಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು.

Advertisement

ನೂತನ ಸರ್ಕಾರದ ಕ್ರಮಗಳು ಸುಪ್ರೀಂ ಕೋರ್ಟ್‌ನ ಬಲವನ್ನು ಕುಗ್ಗಿಸಲಿದೆ, ಅದಕ್ಕೆ ಮಿತಿ ಹೇರಲಿದೆ ಮತ್ತು ರಾಜಕಾರಣಿಗಳಿಗೆ ಹೆಚ್ಚಿನ ಅಧಿಕಾರ ನೀಡಲಿದೆ ಎಂದು ತಜ್ಞರು ಆರೋಪಿದ್ದಾರೆ.

ನಾಗರಿಕರ ಪ್ರತಿಭಟನೆಗಳ ಹೊರತಾಗಿಯೂ ಸೋಮವಾರ ನಡೆಯಲಿರುವ ಸಂಸತ್‌ ಅಧಿವೇಶನದಲ್ಲಿ ನೂತನ ಕಾಯ್ದೆಗಳನ್ನು ಜಾರಿಗೆ ತರಲು ಇಸ್ರೇಲ್‌ ಸರ್ಕಾರ ಮುಂದಾಗಿದೆ.

ಸರ್ಕಾರದ ನೀತಿಗಳನ್ನು ಖಂಡಿಸಿ ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ಆರನೇ ವಾರಕ್ಕೆ ಕಾಲಿರಿಸಿದೆ. ಟೆಲ್‌ ಅವಿವ್‌ನಲ್ಲಿ ಶನಿವಾರ ಬೃಹತ್‌ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next