Advertisement
ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಭಟತೋಟ ಸೇತುವೆಯ 2, 3 ಮತ್ತು 4ನೇ ಸ್ಲಾ Âಬ್ ಬಿರುಕು ಬಿಟ್ಟಿದ್ದು, ಮಧ್ಯದ ಪಿಲ್ಲರ್ ಭೂಮಿಯೊಳಗೆ ಕುಸಿದಿದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಸೇತುವೆ ಪರಿಶೀಲಿಸಿದ ತಹಶೀಲ್ದಾರ್ ಸೇತುವೆಯನ್ನು ಮೇಲೆ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
Related Articles
Advertisement
ಸೇತುವೆ ಮಧ್ಯ ಭಾಗದ ಪಿಲ್ಲರ್ ಕುಸಿದು ಭೀತಿ ಹುಟ್ಟಿಸಿದ ಕಾರಣ, ಸೇತುವೆ ಮೇಲಿನ ಸಂಚಾರವನ್ನು ನಿಷೇಧಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮತ್ತು ಈ ಭಾಗದಲ್ಲಿ ಜನಸಂಚಾರಕ್ಕೆ ಅನುಕೂಲವಾಗುವಂತೆ ಶೀಘ್ರ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಡುವಂತೆ ಪುರಸಭೆ ಮತ್ತು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.
ನೂತನ ಸೇತುವೆಗೆ ಶಿಲಾನ್ಯಾಸ ನಡೆದಿದೆ ಕೈಪುಂಜಾಲು ಭಟತೋಟದಲ್ಲಿ 1996ರಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯು ಶಿಥಿವಾಗಿದ್ದರಿಂದ 1.60 ಕೋ. ರೂ. ವೆಚ್ಚದ ನೂತನ ಸೇತುವೆ ರಚನೆ ಕಾಮಗಾರಿಗೆ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಎರಡೆರಡು ಚುನಾವಣೆ, ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದು ಪುರಸಭೆ ಎಂಜಿನಿಯರ್ ಹೇಳು ತ್ತಿದ್ದಾರೆ. ಸೇತುವೆ ಸಂಚಾರ ಬಂದ್ ಆಗಿರುವುದರಿಂದ ನಾವು ಇನ್ನು ದ್ವೀಪ ಪ್ರದೇಶದಲ್ಲಿ ವಾಸುಸುವರಂತಾಗುವ ಅನಿವಾರ್ಯತೆ ಎದುರಾಗಿದೆ ಎಂದು ಭಟತೋಟ ನಿವಾಸಿ ಹರೀಶ್ ಕುಮಾರ್ ತಿಳಿಸಿದ್ದಾರೆ. ಆದಷ್ಟು ಶೀಘ್ರ ಸೇತುವೆ ನಿರ್ಮಾಣವಾಗಲಿ
ಹಿಂದೆ ಇಲ್ಲಿ ಮರದ ಸೇತುವೆಯಿತ್ತು. 22 ವರ್ಷಗಳ ಹಿಂದೆ ವಸಂತ ಸಾಲಿಯಾನ್ ಅವರು ಶಾಸಕರಾಗಿದ್ದಾಗ ಇಲ್ಲಿ ಕಾಂಕೀÅಟ್ ಪಿಲ್ಲರ್‌ಗಳ ಸಹಿತವಾದ ಸೇತುವೆ ರಚನೆಯಾಗಿತ್ತು. ಸೇತುವೆ ಮತ್ತು ರಸ್ತೆ ರಚನೆ ವೇಳೆ ನಾವು ಕೂಡಾ ಜಾಗ ನೀಡಿ ಸಹಕಾರ ನೀಡಿದ್ದೇವೆ. ಇಲ್ಲಿ ನಿರಂತರವಾಗಿ ವಾಹನಗಳು ಓಡಾಡುತ್ತಿವೆ. ನಾವೆಲ್ಲರೂ ಇದೇ ಸೇತುವೆಯನ್ನು ಬಳಕೆ ಮಾಡುತಿದ್ದೇವೆ. ಮೀನುಗಾರಿಕೆಗೆ ತೆರಳುವವರು, ಕೃಷಿ ಕೆಲಸ ನಡೆಸಲು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಈ ಸೇತುವೆ ತುಂಬಾ ಅನುಕೂಲಕರವಾಗಿದೆ. ಆದಷ್ಟು ಶೀಘ್ರ ಬದಲಿ ವ್ಯವಸ್ಥೆಯೊಂದಿಗೆ, ಸೇತುವೆ ನಿರ್ಮಾಣವಾಗಲಿ ಎಂದು ಸ್ಥಳೀಯರಾದ ದೇವಪುತ್ರ ಸೋನ್ಸ್, ಸಂಜೀವಿ, ರತ್ನಾವತಿ ಆಗ್ರಹಿಸಿದ್ದಾರೆ.
– ಕೈಪುಂಜಾಲು ,
ಭಟತೋಟ ನಿವಾಸಿಗಳು ಜನರ ಪ್ರಾಣ ರಕ್ಷಣೆಗಾಗಿ ಸೇತುವೆ ಸಂಚಾರ ನಿಷೆೇಧ
ಭಾರೀ ಮಳೆಯ ಕಾರಣದಿಂದಾಗಿ ಕೈಪುಂಜಾಲು ಭಟತೋಟ ಸೇತುವೆ ಸಂಪುರ್ಣ ಜಲಾವೃತಗೊಂಡಿದ್ದರಿಂದಾಗಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪುರಸಭೆಯ ಇಂಜಿನಿಯರ್‌ಗಳು ಸೇತುವೆ ಯಾವುದೇ ಸಂದರ್ಭದಲ್ಲೂ ಕುಸಿತಕ್ಕೊಳಗಾಗುವ ಭೀತಿಯಿದೆ ಎಂಬ ವರದಿ ನೀಡಿದೆ. ಆ ಕಾರಣದಿಂದಾಗಿ ಸೇತುವೆ ಮೇಲಿನ ಸಂಚಾರವನ್ನು ನಿಷೇಧಿಸಲಾಗಿದೆ. ಜನರ ಸಂಚಾರಕ್ಕೆ ತೋಂದರೆಯಾದರೂ, ಜನರ ಪ್ರಾಣ ರಕ್ಷಣೆ ನಮ್ಮ ಪ್ರಮುಖ ಕರ್ತವ್ಯವಾಗಿರುವುದರಿಂದ ಸಂಚಾರ ನಿಷೇಧ ತೀರ್ಮಾನ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಗುರುಸಿದ್ಧಯ್ಯ ಹೇಳಿದ್ದಾರೆ.
– ಗುರುಸಿದ್ಧಯ್ಯ ,ಕಾಪು ತಹಶೀಲ್ದಾರ್