Advertisement

ಗೋಕಳ್ಳತನ ತಡೆಗೆ ನಿರ್ದಾಕ್ಷಿಣ್ಯ ಕ್ರಮ; ಪೊಲೀಸರಿಗೆ ಸಚಿವ ಸುನಿಲ್‌ ಸೂಚನೆ

11:57 PM Jan 26, 2022 | Team Udayavani |

ಕಾರ್ಕಳ: ಜಿಲ್ಲೆಯಲ್ಲಿ ಗೋಕಳ್ಳತನ ನಿರಂತರವಾಗಿದೆ. ಕೃತ್ಯ ನಡೆಸುವವರು, ಸಹಕರಿಸುವವರನ್ನು ಪತ್ತೆಹಚ್ಚಿ
ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಗೋಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲೆಯ ಉನ್ನತ ಪೊಲೀಸ್‌ ಅಧಿಕಾರಿಗಳು ಸಹಿತ ವಿವಿಧ ಠಾಣೆಗಳ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ ಅವರು ಕ್ರಮ ಕೈಗೊಳ್ಳುವಂತೆ ಖಡಕ್‌ ಸೂಚನೆ ನೀಡಿದರು.

ರಾತ್ರಿ ಪೊಲೀಸ್‌ ಗಸ್ತು ಹೆಚ್ಚಿಸಬೇಕು, ಚೆಕ್‌ಪೋಸ್ಟ್‌ ಗಳಲ್ಲಿ ನಿಗಾ ಇರಿಸಬೇಕು. ಈ ಹಿಂದೆ ಗೊಕಳ್ಳತನದಲ್ಲಿ ಭಾಗಿಯಾದವರನ್ನು ಠಾಣೆಗೆ ಕರೆಸಿ ತನಿಖೆ ನಡೆಸುವುದು, ಶಂಕಿತ ವ್ಯಕ್ತಿಗಳನ್ನು ತೀವ್ರ ತನಿಖೆಗೆ ಒಳಪಡಿಸುವುದು ಇತ್ಯಾದಿಗಳನ್ನು ನಡೆಸುವಂತೆ ಸೂಚಿಸಿದರು.

15 ದಿನಗಳಲ್ಲಿ ಜಿಲ್ಲೆಯಲ್ಲಿ ಗೋಕಳ್ಳತನ ಸಂಪೂರ್ಣ ಹತೋಟಿಗೆ ತರುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ:ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರಾಜ್ಯದಲ್ಲಿಯೂ ಕಾಂಗ್ರೆಸ್‌ ಶೂನ್ಯದತ್ತ
ಮಂಗಳೂರು: ಮಂಗಳೂರಿನಲ್ಲಿ ಸುದ್ದಿಗಾರರ ಮಾತನಾ ಡಿದ ಸಚಿವ ಸುನಿಲ್‌ ಕುಮಾರ್‌, ದೇಶದಲ್ಲಿ ಕಾಂಗ್ರೆಸ್‌ ಖಾಲಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿಯೂ ನಿಧಾನವಾಗಿ ಖಾಲಿಯಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ಗೆ
ಅಭದ್ರತೆ ಕಾಡುತ್ತಿದೆ. 4 ರಾಜ್ಯ ಉಪ ಚುನಾವಣೆ ಫ‌ಲಿತಾಂಶ,ಬಿಬಿಎಂಪಿ ಚುನಾವಣೆ ಫ‌ಲಿತಾಂಶದಲ್ಲಿ ಕಾಂಗ್ರೆಸ್‌ನ ಸ್ಥಿತಿ ಏನಾಗುತ್ತದೆ ಎಂಬುದು ಗೊತ್ತಾಗಲಿದೆ ಎಂದರು.

ಶೀಘ್ರ ಶಾಸಕರ ಸಭೆ
ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಾಸಕರು ಮತ್ತಷ್ಟು ಒಟ್ಟಾಗಿ ಒಳ್ಳೆಯ ಕಾರ್ಯ ಮಾಡಲು ಸಿದ್ಧತೆ ಮಾಡಬೇಕಿದೆ. ಹೀಗಾಗಿ ಶಾಸಕರ ದಿನಾಂಕಗಳನ್ನು ನೋಡಿಕೊಂಡು ದ.ಕ. ಜಿಲ್ಲೆಯಲ್ಲಿ ಪರಿಶೀಲನೆ ಸಭೆ ಮಾಡಿ ಮುಂದಿನ ಒಂದೂವರೆ ವರ್ಷಗಳಲ್ಲಿ ಜಿಲ್ಲೆಗೆ ಸರಕಾರದಿಂದ ಆಗಬೇಕಾದ ಕಾರ್ಯಗಳ ಬಗ್ಗೆ ಆದ್ಯತಾ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಸಚಿವ ಸುನಿಲ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next