Advertisement
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ಜಾನುವಾರುಗಳ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಕೆಳದಂಡೆ ಮುಲ್ಲಾಮಾರಿ, ಚಂದ್ರಂಪಳ್ಳಿ ನೀರಾವರಿ ಯೋಜನೆ, ಸಣ್ಣ ನೀರಾವರಿ ಕೆರೆಗಳು ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ 1991-92 ನಿರ್ಮಿಸಿಕೊಟ್ಟಿದ್ದಾರೆ. ಆದರೂ ಹೊಲಗಳಿಗೆ ನೀರು ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
ಭಾಕ್ರಾನಂಗಲ್ ನೀರಾವರಿ ಯೋಜನೆಯಿಂದ ಅಲ್ಲಿನ ರೈತರು ಹೈನುಗಾರಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣುತ್ತಿದ್ದಾರೆ. ಹಿಂದುಳಿದ ಪ್ರದೇಶದ ರೈತರಿಗೆ ಮೂಲ ಸೌಕರ್ಯ, ಮಾರ್ಗದರ್ಶನ, ಶಿಕ್ಷಣ, ಕೈಗಾರಿಕೆ ಸ್ಥಾಪಿಸಲು ಅವಕಾಶ ಸಿಕ್ಕಿಲ್ಲ. ಆದ್ದರಿಂದ ಇಲ್ಲಿನ ರೈತರು ನೀರು ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಅಲ್ಲದೇ ರೈತರಿಗೆ ಸಮರ್ಪಕ ಸಾಲ-ಸೌಲಭ್ಯ ಸಿಗುತ್ತಿಲ್ಲ ಎಂದರು. ಹಿರಿಯ ಧುರೀಣ ರಮೇಶ ಯಾಕಾಪುರ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಸಾಧನೆ ಮಾಡಿದವರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು.
ಎಪಿಎಂಸಿ ಪ್ರಾರಂಭಕ್ಕೆ ಮಾಜಿ ಸಚಿವ ದಿ| ವೈಜನಾಥ ಪಾಟೀಲ ಕೊಡುಗೆ ಅಪಾರವಾಗಿದೆ. ಎಪಿಎಂಸಿ ಕಚೇರಿ ಕಟ್ಟಡಕ್ಕಾಗಿ 3ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಕಲಬುರಗಿ ಎಪಿಎಂಸಿ ವಿಭಾಗೀಯ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡ ರಮೇಶ ಧುತ್ತರಗಿ, ಗುಂಡಪ್ಪ ಸರಡಗಿ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಅಶೋಕ ಪಡಶೆಟ್ಟಿ, ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಉಪಾಧ್ಯಕ್ಷ ಶಬ್ಬೀರ ಅಹೆಮದ್, ನಿರ್ದೇಶಕರಾದ ಅಜೀತ್ ಪಾಟೀಲ, ರೇವಣಸಿದ್ಧಪ್ಪ ಪೂಜಾರಿ, ಚಂದ್ರಶೇಖರ ಕಂಬದ, ಚಂದ್ರು ಚೆಂಗು, ರಮೇಶ ಪಡಶೆಟ್ಟಿ, ಗೌರಿಶಂಕರ ಉಪ್ಪಿನ, ಸಂತೋಷ ಗಡಂತಿ, ಕಾರ್ಯದರ್ಶಿ ಉನ್ನಿಮಣಿ, ಪ್ರೇಮಸಿಂಗ್ ಜಾಧವ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ಅಶೋಕ ಚವ್ಹಾಣ, ರಾಜು ಪವಾರ, ಭೀಮಶೆಟ್ಟಿ ಮುರುಡಾ, ಭೀಮಶೆಟ್ಟಿ ಜಾಬಶೆಟ್ಟಿ ಇನ್ನಿತರರು ಭಾಗವಹಿಸಿದ್ದರು. ಉಪಾಧ್ಯಕ್ಷ ಅಣ್ಣಾರಾವ್ ಪೆದ್ದಿ ಸ್ವಾಗತಿಸಿದರು, ಚಂದ್ರಶೇಖರಯ್ಯ ಕಂಬದ ವಂದಿಸಿದರು.