Advertisement

ಮನೆಗೇ ಬೆಂಕಿ ಇಡುವ ಬೆಕ್ಕುಗಳು! ಹುಷಾರಾಗಿರಿ ಎಂದು ಸರ್ಕಾರದಿಂದ ಎಚ್ಚರಿಕೆ

07:52 PM Jan 02, 2022 | Team Udayavani |

ಸಿಯೋಲ್‌: ಬೆಕ್ಕನ್ನು ಇಷ್ಟಪಟ್ಟು ಸಾಕುವವರು ಹಲವರಿದ್ದಾರೆ. ಆದರೆ ದಕ್ಷಿಣ ಕೋರಿಯಾದಲ್ಲಿ ತಾವು ಸಾಕಿದ್ದ ಬೆಕ್ಕುಗಳಿಂದಲೇ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಅದಕ್ಕೆ ನಿದರ್ಶನವೆಂಬಂತೆ ಅಲ್ಲಿ ಕಳೆದ 3 ವರ್ಷಗಳಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಅದೇ ಮನೆಯ ಬೆಕ್ಕುಗಳೇ ಬೆಂಕಿ ಇಟ್ಟಿವೆಯಂತೆ!

Advertisement

ಸಿಯೋಲ್‌ ಮಹಾನಗರ ಅಗ್ನಿಶಾಮಕ ದಳದ ಅಧಿಕಾರಿಗಳು ಇತ್ತೀಚೆಗೆ ದೇಶದ ಜನತೆಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರೆ. “2019ರ ಜನವರಿಯಿಂದ 2021ರ ನವೆಂಬರ್‌ವರೆಗೆ ಒಟ್ಟು 107 ಮನೆಗಳಲ್ಲಿ ಅವೇ ಮನೆ ಗಳ ಸಾಕು ಬೆಕ್ಕುಗಳಿಂದಲೇ ಬೆಂಕಿ ಅವಘಡ ಸಂಭವಿಸಿದೆ. ಆ ಹಿನ್ನೆಲೆಯಲ್ಲಿ ಬೆಕ್ಕು ಸಾಕಿರುವವರು ಎಚ್ಚರಿಕೆಯಿಂದಿರಿ’ ಎಂದು ಸೂಚಿಸಿದೆ.

ಅಡುಗೆಗೆಂದು ಬಳಸುವ ಹಾಟ್‌ಪ್ಲೇಟ್‌(ಇಂಡಕ್ಷನ್‌ ಕುಕ್‌ಟಾಪ್‌ನಂತರ ವಿದ್ಯುತ್‌ ಆಧಾರಿತ ಸ್ಟವ್‌ಗಳು)ಗಳ ಮೇಲೆ ಹತ್ತುವ ಬೆಕ್ಕುಗಳು ಗೊತ್ತಿಲ್ಲದೆ, ಅದರ ಬಟನ್‌ ಆನ್‌ ಮಾಡಿಬಿಡುತ್ತವೆಯಂತೆ. ಗಂಟೆಗಳ ಕಾಲ ಹಾಟ್‌ಪ್ಲೇಟ್‌ ಆನ್‌ ಆಗಿದ್ದು, ಬಳಕೆಯಲ್ಲಿಲ್ಲವೆಂದಾಗ ಬೆಂಕಿ ಹತ್ತಿ ಉರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲೇ ಬೆಕ್ಕುಗಳಿಂದ ಈ ರೀತಿಯ ಸಮಸ್ಯೆ ಹೆಚ್ಚಾಗಿರುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ:ನಾಗಮಂಗಲ: ಬಸ್ ಢಿಕ್ಕಿ; ಕಾರಿನಲ್ಲಿದ್ದ ನವ ದಂಪತಿ ಸೇರಿ, ಮೂವರು ದಾರುಣ ಸಾವು

ಅಮೆರಿಕದಲ್ಲೂ ತಪ್ಪದ ಕಾಟ:
ಕೇವಲ ದಕ್ಷಿಣ ಕೋರಿಯಾ ಮಾತ್ರವಲ್ಲ ಅಮೆರಿಕದಲ್ಲೂ ಇದೇ ರೀತಿಯ ಸಮಸ್ಯೆಯಿದೆಯಂತೆ. ಅಮೆರಿಕದ ಹ್ಯೂಮನ್‌ ಅಸೋಸಿಯೇಷನ್‌ ಕೊಟ್ಟಿರುವ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಬೆಕ್ಕುಗಳಿಂದ ಕನಿಷ್ಠ ಒಂದು ಸಾವಿರ ಮನೆಗಳಲ್ಲಿ ಬೆಂಕಿ ಅವಗಢ ಸಂಭವಿಸುತ್ತಿದೆಯಂತೆ. ಬೆಕ್ಕುಗಳು ವೈಯರ್‌ಗಳನ್ನು ಕತ್ತರಿಸುತ್ತಿರುವುದು ಮತ್ತು ಕ್ಯಾಂಡಲ್‌ಗ‌ಳ ಜೊತೆ ಆಟವಾಡುತ್ತಿರುವುದರಿಂದಾಗಿ ಹೀಗಾಗಿದೆಯಂತೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next