Advertisement
ಶಾಂತವಾಗಿ ನಿಂತ ನೀರಿನ ಕೊಳಕ್ಕೆ ತದ್ವಿರುದ್ದವಾಗಿ ರಭಸದಿಂದ ಮೇಲೇರಿಬರುವ ಸಾಗರದ ಅಲೆಗಳು ಉಂಟುಮಾಡುವ ಭಾವೋದ್ರೇಕದಂತೆ ಛಾಯಾಗ್ರಹಣದಲ್ಲೂ ತಟಸ್ಥಕ್ಕಿಂತ ಆಕ್ಷನ್ ಚಿತ್ರಗಳಿಗೆ ವಿಶೇಷ ಸ್ಥಾನವಿದೆ. ನಿಶ್ಚಲ ದೃಶ್ಯವೊಂದನ್ನು ಸೆರೆಹಿಡಿದಷ್ಟು ಸಲೀಸಲ್ಲ, ಈ ಚಲನಶೀಲ ಛಾಯಾಗ್ರಹಣ. ಸಾಧಾರಣ ನಡಿಗೆಯ ಚಲನೆಯನ್ನು ಸೆರೆಹಿಡಿಯಲು ಕ್ಯಾಮೆರಾದ ಶಟರ್ ಸ್ಪೀಡ್ 1/125 ಸೆಕೆಂಡ್ ಇರಬೇಕು.
Related Articles
Advertisement
ತೋಟಗಾರಿಕೆಯವರು ಅಳವಡಿಸಿದ್ದ ಸ್ಪ್ರಿಂಕ್ಲರ್‌ಗಳು ಚಿಮ್ಮಿಸುತ್ತಿದ್ದ ನೀರಿನ ಹನಿಗಳಲ್ಲಿ ಕೈ-ಮೈ ತೋಯಿಸಿಕೊಂಡು ಆ ಮಕ್ಕಳು ಕುಪ್ಪಳಿಸುತ್ತಿದ್ದಾಗ ಫೋಟೋಗ್ರಾಫರ್ ದಿಗ್ವಾಸ್ ಬೆಳ್ಳೆಮನೆ ಅವರು ದೂರದಿಂದ ಆ ದೃಶ್ಯವನ್ನು ಸೂರ್ಯನ ಎದುರು ಬೆಳಕಿನಲ್ಲಿ , ಸಮಂಜಸವಾಗಿ ಸಂಯೋಜಿಸಿ ಉತ್ತಮವಾದ ಅಂತಭಾಸದಲ್ಲಿ ( ಪಸ್ಪೆìಕ್ಟಿವ್) ಸೆರೆಹಿಡಿದಿರುವುದು. ಮುಖ್ಯವಾಗಿ ಗಮನಿಸಬೇಕಾದ್ದು ಇಲ್ಲಿ ಎರಡುಬಗೆಯ ಚಲನಾಕ್ರಮಗಳನ್ನು.
ಚಿಣ್ಣರ ಕುಣಿದಾಟವನ್ನು ಅಲುಗಾಡದಂತೆ ದಾಖಲಿಸಲು ಕನಿಷ್ಠ 1/250 ಸೆಕೆಂಡ್ ಶಟರ್ ವೇಗ ಬೇಕು. ನೀರಿನ ಹನಿ ಹನಿಯನ್ನೂ ಅಂತೆಯೇ ಚುಕ್ಕೆ ಚುಕ್ಕೆಯಾಗಿ ದಾಖಲಿಸಲು 1/500 ಸೆಕೆಂಡ್‌ಗೂ ಮಿಗಿಲಾದ ವೇಗ ಬೇಕು. ದಿಗ್ವಾಸ್ ತಮ್ಮ ಅನುಭವದ ಜಾಣ್ಮೆಯಿಂದ ಶಟರ್ ವೇಗವನ್ನು 1/250 ಮಾತ್ರ ಇಟ್ಟು, ಎದುರು ಬೆಳಕಿನಲ್ಲಿ ಮಿಂಚುತ್ತಿದ್ದ ನೀರಿನಹನಿಗಳ 3-4 ಇಂಚುಗಳ ಚಲನೆಯನ್ನೂ ಗೀರು ಗೀರಾಗಿ ದಾಖಲಿಸಿ ಇಡೀ ದೃಶ್ಯಕ್ಕೆ ಜೀವಂತಿಕೆ ತುಂಬಿದ್ದಾರೆ.
ಮತ್ತೂಂದು, ಕೋಲಾಟದ ಚಿತ್ರ. ಹಲವು ವರ್ಷಗಳ ಹಿಂದೆ ಜಯನಗರದ ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿನ ಕೋಲಾಟದ ಸಂದರ್ಭ. ಸಹಜ ಬೆಳಕು ಕಡಿಮೆಯಾಗುತ್ತಿದ್ದಂತೆ ಬೆಳಕು ನೇರವಾಗಿ ಕಲಾವಿದರ ಮೇಲೆ ಬೀಳದಂತೆ ಪ್ರತಿಫಲನ ( ರಿಫ್ಲೆಕ್ಟರ್) ಅಳವಡಿಸಿಕೊಂಡ ದೊಡ್ಡ ಫ್ಲಾಶ್ ಲೈಟನ್ನು ಬೌನ್ಸ್ ಮಾಡಿ, ಆಕ್ಷನ್ ಭರಿತ ಭಂಗಿಯನ್ನು 9 ಅಡಿ ದೂರದಿಂದ ಸೆರೆಹಿಡಿದಿದ್ದೆ. ಶಟರ್ ವೇಗ 1/200 ಸೆಕೆಂಡ್ ಇದ್ದಿದ್ದರಿಂದ, ಟ್ರೈಪಾಡ್ ಬಳಸಿಲ್ಲ. ಹೀಗಾಗಿ, ಕೋಲಾಟದ ಕಲಾವಿದೆಯ ಹಾವ ಭಾವವನ್ನು ಆಕೆಗೆ ಅರಿವಿಲ್ಲದೆಯೇ ಸ್ಪುಟವಾಗಿ ಸೆರೆಹಿಡಿಯಲು ಸಾಧ್ಯವಾಗಿತ್ತು.
ಚಿಮ್ಮಿದ ನೀರಲ್ಲಿ , ಹಿಗ್ಗಿದ ಖುಷಿ….: ಕ್ಯಾಮೆರಾ ಲೆನ್ಸ್‌ನ ಫೋಕಲ್ ಲೆಂಗ್ – 285 ಎಂ.ಎಂ. , ಅಪಾರ್ಚರ್ ಊ6.3, ಶಟರ್ ವೇಗ 1/250 ಸೆಕೆಂಡ್, ಐಎಸ್‌ಓ400, ಫ್ಲಾಶ್ ಬಳಸಿಲ್ಲ
ಅವನ್ಯಾರೇ… ಆ ಚಲುವ? ..: ಕ್ಯಾಮೆರಾ ಲೆನ್ಸ್‌ನ ಫೋಕಲ್ ಲೆಂಗ್ – 70 ಎಂ.ಎಂ., ಅಪಾರ್ಚರ್ ಊ 8, ಶಟರ್ ವೇಗ 1/200 ಸೆಕೆಂಡ್, ಐ.ಎಸ್.ಓ. 400, ಫ್ಲಾಶ್ ಬೌನ್ಸ್ ಮಾಡಿದೆ
* ಕೆ.ಎಸ್. ರಾಜಾರಾಮ್