ವಿಜಯಪುರ: ಮಳೆ ನೀರು ಕೊಯ್ಲು ಎಂದರೆ ಭೂಮಿಯ ಮೇಲೆ ಬಿದ್ದ ನೀರನ್ನು ವಿವಿಧ ಅವಶ್ಯಕತೆಗಳಿಗೆ ಬಳಸಿಕೊಳ್ಳುವುದು ಎಂದು ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲ ಎಸ್.ಎಸ್.ಪ್ರದೀಪ್ ತಿಳಿಸಿದರು.
ಪಟ್ಟಣದ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಬೆಂಗಳೂರು ನಗರ ಜಿಲ್ಲಾನೆಹರು ಯುವ ಕೇಂದ್ರದ ವತಿಯಿಂದ ಜಿಲ್ಲೆಯ ಯುವಕ ಸಂಘ, ಯುವತಿ ಮಂಡಳಿಗಳ ಪದಾಧಿಕಾರಿಗಳಿಗಾಗಿ ಪ್ರಗತಿ ಸಂ.ಪ.ಪೂ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕ್ಯಾಚ್ ದಿ ರೈನ್ – ವೆನ್ ಇಟ್ ಫಾಲ್ಸ್ , ವೇರ್ ಇಟ್ ಫಾಲ್ಸ್ ವಿಷಯ ಸಂಬಂಧಿಸಿ ನಡೆದ ವೆಬಿನಾರ್ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಪುನರ್ ಬಳಕೆ ಮಾಡಿಕೊಳ್ಳಲು ಅನುವು: ನೀರು ಅಮೂಲ್ಯವಾದದ್ದು, ಮುಂದಿನ ಪೀಳಿಗೆಗೆ ನಾವು ನೀರನ್ನು ಉಳಿಸಬೇಕು ಮತ್ತು ಕೊಡುಗೆಯಾಗಿ ನೀಡಬೇಕು. ನೀರಿನ ಸದ್ಬಳಕೆ ಮಿತವಾಗಿರಲಿ. ಮಳೆನೀರಿನ ಸಂಗ್ರಹಣೆ ಬಗ್ಗೆ ಇಂಗುಗುಂಡಿಗಳನ್ನು ನಿರ್ಮಿಸಿ ಮನೆಯ ಚಾವಣಿ ಮೇಲೆ ಬಿದ್ದಂತಹ ನೀರು ಸಂಗ್ರಹಿಸಿ ಪುನರ್ ಬಳಕೆ ಮಾಡಿಕೊಳ್ಳಲು ಅನುವು ಮಾಡಬೇಕು ಹಾಗೂ ಸರ್ಕಾರಿ ಕಚೇರಿ ಗಳುಆಸ್ಪತ್ರೆ, ಶಾಲೆ-ಕಾಲೇಜು, ಕಾರ್ಖಾನೆಗಳ ಮೇಲೆ ಬಿದ್ದ ನೀರನ್ನು ಸಂಗ್ರಹಿಸಿ ಬಳಕೆ ಮಾಡುವು ದರಿಂದ ನೀರನ್ನು ಕಾಪಾಡಲು ಸಹಕಾರವಾಗುತ್ತದೆ ಎಂದರು.
ಯುವ ಜನತೆಗೆ ಮಾಹಿತಿ: ವೆಬಿನಾರ್ ಕಾರ್ಯಕ್ರಮ ದಲ್ಲಿ ಭಾರತ ದೇಶದ ಉಪ ರಾಷ್ಟ್ರಪತಿಗಳಾದ ಎಂ. ವೆಂಕಯ್ಯ ನಾಯ್ಡು ರವರು ನೀಡಿದ ಸಂದೇಶದ ಭಾಷಣ ನೀಡಿ ಕೃಷಿ ಮತ್ತು ಕೃಷಿಯೇತರ ಪ್ರದೇಶಗಳಲ್ಲಿ ಮಳೆ ನೀರಿನ ಕೊಯ್ಲು ಹಾಗೂ ಚಾವಣಿ ಮಳೆ ನೀರಿನ ಕೊಯ್ಲು ಬಗ್ಗೆ ಮತ್ತು ತಾಂತ್ರಿಕ ವಿಧಾನದಿಂದ ಮಳೆ ನೀರು ಸಂರಕ್ಷಣೆ ಬಗ್ಗೆ ಯುವಜನತೆಗೆ ನೀಡಿದ ಮಾಹಿತಿ ತಿಳಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ನೆಹರು ಯುವ ಕೇಂದ್ರ ಬೆಂಗಳೂರು ನಗರಜಿಲ್ಲೆಯ ಜಿಲ್ಲಾ ಯುವ ಅಧಿಕಾರಿ ವಿನಯ್ ಕುಮಾರ್ ನೆರವೇರಿಸಿದರು. ಜಿಲ್ಲೆಯ ಯುವಕ- ಯುವತಿ ಮಂಡಳಿಗಳ ಪದಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಭಾಗವಹಿಸಿ ಮಳೆ ನೀರಿನ ಕೊಯ್ಲು ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದರು.
ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕರು ಡಾ.ವಿ.ಪ್ರಶಾಂತ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿಕೊಟ್ಟರು. ಮಳೆನೀರು ಸಂರಕ್ಷಣೆ , ಜಲಶಕ್ತಿ ರಕ್ಷಣೆ ಕುರಿತು ಯುವಕ ಸಂಘಗಳ ಪ್ರತಿನಿಧಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಕಾಲೇಜಿನ ಉಪನ್ಯಾಸಕಿ ಎ.ಸಿಸಿಲಿಯಾ ಮೇರಿ,ಬಿ.ಎಸ್ ಭಾಸ್ಕರ್, ಎನ್.ಮನೋಹರ್, ಬಿ.ರಶ್ಮಿ, ಭರತ್, ಎಚ್.ಎಂ.ವೆಂಕಟೇಶ್ ಹಾಗೂ ಯುವಕ, ಯುವತಿಯರು ಇದ್ದರು.