Advertisement

ಬೆಂಗಳೂರಿನ ಎಂಜಿನಿಯರ್‌ಗೆ ಕ್ಯಾಟ್‌ನಲ್ಲಿ ಶೇ. 99.99 ಅಂಕ!

01:54 AM Jan 04, 2021 | Team Udayavani |

ಹೊಸದಿಲ್ಲಿ: ಬೆಂಗಳೂರಿನ ಟೆಕ್‌ ಕಂಪೆನಿಯಲ್ಲಿ 2 ವರ್ಷ ಕೆಲಸ ಮಾಡಿ, ಕ್ಯಾಟ್‌ ಪರೀಕ್ಷೆ ಬರೆದಿದ್ದ ಹಿಮಾಚಲ ಪ್ರದೇಶದ ವಿದ್ಯಾರ್ಥಿ ವಿಶೇಷ್‌ ಗರ್ಗ್‌ ಶೇ. 99.99 ಅಂಕ ಪಡೆದು ಟಾಪರ್‌ ಆಗಿದ್ದಾರೆ.

Advertisement

23 ವರ್ಷದ ವಿಶೇಷ್‌, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ)ಯ ಈ ಯಶಸ್ಸಿಗೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮತ್ತು ಗೂಗಲ್‌ನ ಸಿಇಒ ಸುಂದರ್‌ ಪಿಚೈ ಪ್ರೇರಣೆ ಎಂದಿದ್ದಾರೆ.

ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ನಲ್ಲಿ ಬಿ.ಟೆಕ್‌ ಓದುತ್ತಿರುವಾಗ ಸತ್ಯ ನಾದೆಳ್ಲ ಮತ್ತು ಸುಂದರ್‌ ಪಿಚೈ ಅವರ ಜೀವನಗಾಥೆಗಳನ್ನು ಓದುತ್ತಿದ್ದೆ. ಮೈಕ್ರೋಸಾಫ್ಟ್, ಗೂಗಲ್‌ನ ಚುಕ್ಕಾಣಿ ಹಿಡಿಯುವ ಮೂಲಕ ಜಗತ್ತಿನ ತಾಂತ್ರಿಕ ವಿನ್ಯಾಸಕ್ಕೆ ಅವರು ನೀಡಿದ ಕೊಡುಗೆ ಕಂಡು ಹೆಮ್ಮೆ ಪಡುತ್ತಿದ್ದೆ. ನಾನೂ ದೈತ್ಯ ಕಂಪೆನಿಗಳ ಸಿಇಒ ಆಗುವೆ ಎಂದು ಕನಸು ಕಾಣುತ್ತಿದ್ದೆ ಎಂದಿದ್ದಾರೆ.

ಪ್ರಸ್ತುತ ವಿಶೇಷ್‌, ಬೆಂಗಳೂರಿನ ಐಐಎಂ ಅಥವಾ ದಿಲ್ಲಿ ವಿ.ವಿ.ಯ ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುವ ಆಕಾಂಕ್ಷೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next