Advertisement

ಮೂವರು ಕೈ ಸದಸ್ಯರ ವಿರುದ್ಧ ಜಾತಿ ನಿಂದನೆ ದೂರು

01:25 PM Oct 31, 2020 | Suhan S |

ಹಾವೇರಿ: ಸ್ಥಳೀಯ ನಗರಸಭೆ ಅಧಿ ಕಾರದ ಗದ್ದುಗೆ ಏರಲು ಕೈ-ಕಮಲದ ನಡುವೆ ತೀವ್ರಕಸರತ್ತು ನಡೆದಿರುವ ಬೆನ್ನಲ್ಲೇ ಕಾಂಗ್ರೆಸ್ಸಿನಮೂವರು ಸದಸ್ಯರ ಮೇಲೆ ಜಾತಿ ನಿಂದನೆ ಆರೋಪದಡಿ ದೂರು ದಾಖಲಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುತೂಹಲ ಹೆಚ್ಚಿಸಿದೆ.

Advertisement

ಗುರುವಾರ ರಾತ್ರಿ ಮೂವರು ಕಾಂಗ್ರೆಸ್‌ ಸದಸ್ಯರ ಮೇಲೆ ದಲಿತ ದೌರ್ಜನ್ಯ, ಜಾತಿ ನಿಂದನೆ ಕೇಸ್‌ ದಾಖಲಾಗಿದೆ. ನಾಗೇಂದ್ರನಮಟ್ಟಿಯನಿವೇಶನವೊಂದಕ್ಕೆ ಸಂಬಂ ಧಿಸಿದಂತೆಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಕೊಲೆ ಪ್ರಯತ್ನ ನಡೆಸಿದ್ದಾರೆ ಎಂದು ಶಾಂತಮ್ಮಡಂಬರಳ್ಳಿ ಎಂಬವರು ನಗರಸಭೆ ಸದಸ್ಯರಾದ ಐ.ಯು.ಪಠಾಣ, ಮಂಜುನಾಥ ಬಿಷ್ಟಣ್ಣನವರಹಾಗೂ ಪೀರಸಾಬ್‌ ಚೋಪದಾರ ಇತರರವಿರುದ್ಧ ನೀಡಿದ ದೂರಿನ ಮೇರೆಗೆ ಶಹರಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆದ್ದರಿಂದ ಈ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಲು ನಗರಸಭೆಗೆ ಆಗಮಿಸುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಒಂದು ವೇಳೆ ಈ ಮೂವರು ಸದಸ್ಯರು ಗೈರಾದರೆ ಕಾಂಗ್ರೆಸ್‌ಗೆ ಕಷ್ಟಕರವಾಗಲಿದೆ. ಆಗ ಸಭೆಯ ಕೋರಂ 30 ಆಗಲಿದ್ದು, ಮ್ಯಾಜಿಕ್‌ ಸಂಖ್ಯೆ 16ಕ್ಕೆ ಇಳಿಯಲಿದೆ. ಆಗ ಸ್ಥಳೀಯ ಬಿಜೆಪಿ ಶಾಸಕರು, ಬಿಜೆಪಿ ಸಂಸದರು ಹಾಗೂ ಪಕ್ಷೇತರರ ಬೆಂಬಲ ಪಡೆದು ಬಿಜೆಪಿ ಮ್ಯಾಜಿಕ್‌ ನಂಬರ್‌ ತಲುಪಿ ಗದ್ದುಗೆ ಹಿಡಿಯಲು ಮುಂದಾಗುವ ಚಿಂತನೆ ನಡೆಸಿದ್ದಾರೆ. ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್‌ ನಾಯಕರು ಮತ್ತೂಬ್ಬ ಪಕ್ಷೇತರ ಅಭ್ಯರ್ಥಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.

ದೂರು ದಾಖಲಾಗಿರುವ ಪ್ರಕರಣದ ಕುರಿತು ಮೇಲಧಿ ಕಾರಿಗಳು ತನಿಖೆ ನಡೆಸಿದ್ದು, ಮೂವರು ಸದಸ್ಯರು ಸಭೆಗಹಾಜರಾಗಲು ಸಮಸ್ಯೆಯಾಗುವುದಿಲ್ಲ ಎಂದು  ಹೇಳಲಾಗುತ್ತಿದೆ. ರಾಜಕೀಯ ಒತ್ತಡದಲ್ಲಿ ಸದಸ್ಯರು ಸಭೆಗೆ ಹಾಜರಾಗಲು ಬಂದಾಗಪೊಲೀಸರು ಅವರನ್ನು ಬಂಧಿ ಸಿದರೆ ಕಾಂಗ್ರೆಸ್‌ ಗೆ ಕಷ್ಟವಾಗಲಿದೆ. ಒಟ್ಟಿನಲ್ಲಿ ನಗರಸಭೆ ಗದ್ದುಗೆ ಗುದ್ದಾಟ ತಾರಕಕ್ಕೇರಿದೆ. ಪಕ್ಷೇತರರು ಕೈಗೊಳ್ಳುವತೀರ್ಮಾನ ಹಾಗೂ ಪ್ರಕರಣದ ಹಿನ್ನೆಲೆಯಲ್ಲಿಪೊಲೀಸರು ಕೈಗೊಳ್ಳುವ ಕಾನೂನು ಕ್ರಮದ ಮೇಲೆ ನಗರಸಭೆ ಗದ್ದುಗೆ ಫಲಿತಾಂಶ ಅವಲಂಬಿಸಿದೆ.

ದಲಿತ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ಆರೋಪದಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಗೆ ತನಿಖಾಧಿಕಾರಿಯನ್ನು ನೇಮಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. – ಕೆ.ಜಿ.ದೇವರಾಜು, ಎಸ್ಪಿ, ಹಾವೇರಿ

Advertisement

ನಮ್ಮ ಪಕ್ಷ‌ದ ಮೂವರು ಸದಸ್ಯರಮೇಲೆ ರಾಜಕೀಯ ಪ್ರೇರಿತ ದೂರು ದಾಖಲಾಗಿದ್ದು, ಅದಕ್ಕಾಗಿ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. – ಎಂ.ಎಂ.ಹಿರೇಮಠ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು

ಪಕ್ಷೇತರರಲ್ಲಿ ಐವರು ಸದಸ್ಯರು ಬಿಜೆಪಿ ಬೆಂಬಲಿಸಲಿದ್ದಾರೆ. ಆದ್ದರಿಂದ ನಗರಸಭೆ ಅಧ್ಯಕ್ಷ‌, ಉಪಾಧ್ಯಕ್ಷ‌ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್‌ ಸದಸ್ಯರ ಮೇಲೆ ಕೇಸ್‌ ದಾಖಲಾಗಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. – ನೆಹರು ಓಲೇಕಾರ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next