Advertisement
ಜತೆಗೆ ಶ್ರೀಲಂಕಾದಲ್ಲಿ ಬೆಂಗಳೂರಿನವರ ಮಾಲಕತ್ವದ ಕ್ಯಾಸಿನೋಗಳೂ ಇವೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿವೆ.
Related Articles
Advertisement
ಶ್ರೀಲಂಕಾಕ್ಕೆ ಗಾಂಜಾ ಸಹಿತ ಹಲವು ಮಾದಕ ವಸ್ತುಗಳು ಇದೇ ರಾಜ್ಯಗಳಿಂದ ಹೋಗುತ್ತಿವೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಇದು ಎಲ್ಲರಿಗೂ ಗೊತ್ತಿದ್ದರೂ ವ್ಯವಸ್ಥಿತವಾಗಿ ಬಹಿರಂಗವಾಗದಂತೆ ನೋಡಿಕೊಳ್ಳಲಾಗುತ್ತಿತ್ತು ಎಂದೂ ಮೂಲಗಳು ತಿಳಿಸಿವೆ.
ಆದರೆ, ಸ್ಯಾಂಡಲ್‌ವುಡ್ ಪ್ರಕರಣ ಬಯಲಾಗುತ್ತಿದ್ದಂತೆ ಬೇರೆ ಬೇರೆ ದೃಷ್ಟಿಕೋನಗಳಿಂದ ತನಿಖೆ ನಡೆಯಲು ಆರಂಭವಾಗಿವೆ. ಬೆಂಗಳೂರು ಪೊಲೀಸರು ಮಾತ್ರವಲ್ಲದೆ ಜಾರಿ ನಿರ್ದೇಶನಾಲಯ, ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು, ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ) ಆಂತರಿಕ ಭದ್ರತಾ ವಿಭಾಗಗಳು (ಐಎಸ್‌ಡಿ) ಒಟ್ಟಾರೆ ತನಿಖೆಯಲ್ಲಿ ಪಾಲ್ಗೊಂಡಿವೆ.
ಪ್ರತಿ ಹಂತದಲ್ಲೂ ಬದಲಾವಣೆ!ಡ್ರಗ್ಸ್ ಮಾಫಿಯಾ ಎಂಬುದು ಬಹುದೊಡ್ಡ ಜಾಲ. ಒಂದು ವ್ಯಕ್ತಿಯಿಂದ ಮತ್ತೂಬ್ಬ ವ್ಯಕ್ತಿಗೆ ಬದಲಾಗುತ್ತದೆ. ಆದರೆ, ಈ ವ್ಯಕ್ತಿಗಳ ಹಿಂದಿನ ಕೈ ಯಾವುದು ಎಂಬುದನ್ನು ಇದುವರೆಗೂ ಪತ್ತೆಹಚ್ಚಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬೆಂಗಳೂರಿ ನಿಂದ ತಮಿಳುನಾಡು ಅಥವಾ ಆಂಧ್ರಪ್ರದೇಶ, ಕೇರಳಕ್ಕೆ ಡ್ರಗ್ಸ್ ಸರಬರಾಜು ಮಾಡಲು ಕನಿಷ್ಠ 6-8 ತಂಡಗಳು ಕಾರ್ಯ ನಿರ್ವಹಿಸುತ್ತವೆ. ಪ್ರತಿ ತಂಡಕ್ಕೂ ತನಗೆ ಮಾಲು ಕೊಟ್ಟ ವ್ಯಕ್ತಿಯ ಹಿನ್ನೆಲೆ ತಿಳಿದಿರುವುದಿಲ್ಲ. ಹೀಗಾಗಿ ದಂಧೆ ಬೃಹದಾಕಾರವಾಗಿ ಬೆಳೆದುಕೊಂಡಿದೆ ಎನ್ನುತ್ತವೆ ಮೂಲಗಳು. ರಾಜ್ಯದವರ ಮೂರು ಕ್ಯಾಸಿನೋ!
ರಾಜ್ಯ ಪೊಲೀಸ್ ಮೂಲಗಳ ಪ್ರಕಾರ, ರಾಜಧಾನಿ ಬೆಂಗಳೂರಿನ ಶ್ರೀಮಂತ ವ್ಯಕ್ತಿಗಳ ಪಾಲುದಾರಿಕೆಯಲ್ಲಿ ಶ್ರೀಲಂಕಾದಲ್ಲಿ ಮೂರು ಕ್ಯಾಸಿನೋ ಸಂಸ್ಥೆಗಳು ನಡೆಯತ್ತಿವೆ. ಅಲ್ಲದೆ, ನಗರದ ಸಾಕಷ್ಟು ಮಂದಿ ಅದೇ ಕ್ಯಾಸಿನೋ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅಡ್ಡೆಗಳಿಗೆ ದಕ್ಷಿಣ ಭಾರತದ ರಾಜ್ಯಗಳಿಂದ ಡ್ರಗ್ಸ್ ಪೂರೈಕೆಯಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.