Advertisement

ಉಡುಪಿ ಗ್ರಾ.ಪಂ.ಗಳಲ್ಲಿ “ನಗದುರಹಿತ’ವ್ಯವಹಾರ

02:04 AM Feb 06, 2020 | mahesh |

ಉಡುಪಿ: ಕಾಡೂರು ಗ್ರಾಮ ಪಂಚಾಯತ್‌ನಲ್ಲಿ “ನಗದುರಹಿತ’ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ 158 ಗ್ರಾ.ಪಂ.ಗಳಲ್ಲೂ ಜಾರಿಗೊಳಿಸಲು ಸರಕಾರ ಆದೇಶಿದ್ದು, ಮುಂದೆ ರಾಜ್ಯದ ಎಲ್ಲ 5,659 ಗ್ರಾ.ಪಂ.ಗಳಿಗೆ ವಿಸ್ತರಣೆಯಾಲಿದೆ. ಮೊದಲ ಹಂತದಲ್ಲಿ 15 ಗ್ರಾ.ಪಂ.ಗಳಾದ ಆರೂರು, ಕುಕ್ಕೆಹಳ್ಳಿ, ಚೇರ್ಕಾಡಿ, ಇನ್ನಂಜೆ, ಕುಂಭಾಶಿ, ತೆಕ್ಕಟ್ಟೆ, ಹೊಸಾಡು, ತ್ರಾಸಿ, ಮರ ವಂತೆ, ವಂಡ್ಸೆ, ವರಂಗ, ಬೈಲೂರು, ಎರ್ಲಪಾಡಿ, ಮರ್ಣೆ, ಹಾವಂಜೆ, ಕಡ್ತಲ ಗ್ರಾ.ಪಂ.ಗಳಲ್ಲಿ ಜಾರಿಯಾಗಲಿದೆ.

Advertisement

ಶೇ. 78ರಷ್ಟು ಸಾಧನೆ
ಡಿಜಿಟಲ್‌ ಇಂಡಿಯಾ ಪರಿಕಲ್ಪನೆ ಅನುಷ್ಠಾನ ನಿಟ್ಟಿನಲ್ಲಿ “ನಗದುರಹಿತ’ ಪೈಲಟ್‌ ಯೋಜನೆಗಾಗಿ
ಸಂಸದರ ಆದರ್ಶ ಗ್ರಾಮವಾದ ಕಾಡೂರನ್ನು 2018-19ರಲ್ಲಿ ಆಯ್ಕೆ ಮಾಡಲಾಗಿತ್ತು. ಈ ಗ್ರಾ.ಪಂ. ವ್ಯಾಪ್ತಿಯ 1,106 ಮನೆಗಳಲ್ಲಿ 780 ಕುಟುಂಬಗಳ ತೆರಿಗೆ, ನೀರಿನ ಬಿಲ್‌, ಘನ-ದ್ರವ ತ್ಯಾಜ್ಯ ನಿರ್ವಹಣೆ ಬಿಲ್‌ ಪಾವತಿಯನ್ನು ನಗದು ರಹಿತವಾಗಿ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಆನ್‌ಲೈನ್‌ ಅಪ್ಲಿಕೇಶ್‌ನ ಮೂಲಕ ಶೇ. 78ರಷ್ಟು ತೆರಿಗೆ ಪಾವತಿಯಾಗಿದೆ.

“ಯುವ ಪೇ ಆ್ಯಪ್‌’
ಉಡ್ಮಾ ಟೆಕ್ನಾಲಜಿ ಸಂಸ್ಥೆಯು ಕಾಡೂರು ಗ್ರಾ.ಪಂ.ಗೆ ಯುವ ಪೇ ಆ್ಯಪ್‌ ಪರಿಚಯಿಸಿದೆ. ಇಂಟರ್‌ನೆಟ್‌ ಸೇವೆ ಹಾಗೂ ಸ್ಮಾರ್ಟ್‌ ಫೋನ್‌ ಇಲ್ಲದೆ ಬಿಲ್‌, ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ನೆಟ್‌ವರ್ಕ್‌ ಇಲ್ಲದ ಪ್ರದೇಶದ ಲ್ಲಿಯೂ ಈ ಅಪ್ಲಿಕೇಶನ್‌ ಕೆಲಸ ನಿರ್ವಹಿಸಲಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಬಹುದು.

ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕಾಡೂರು ಗ್ರಾ.ಪಂ. “ನಗದು ರಹಿತ’ ಯೋಜನೆಗೆ ಆಯ್ಕೆಯಾಗಿತ್ತು. ಕಾಡೂರು ಹಾಗೂ ನಡೂರಿನ 780 ಕುಟುಂಬದವರು ಆನ್‌ಲೈನ್‌ ಅಪ್ಲಿಕೇಶನ್‌ ಮೂಲಕ ತೆರಿಗೆ ಪಾವತಿಸುತ್ತಿದ್ದಾರೆ. ಗ್ರಾ.ಪಂ.ಗೆ ಅಲೆಯುವ ಕೆಲಸ ತಪ್ಪಿದ್ದು, ಶೀಘ್ರವಾಗಿದೆ ತೆರಿಗೆ ಪಾವತಿಯಾಗುತ್ತಿದೆ.
– ಮಹೇಶ್‌, ಪಿಡಿಒ ಕಾಡೂರು ಗ್ರಾ.ಪಂ.

ಕಾಡೂರು ಗ್ರಾ.ಪಂ.ನ ಶೇ. 78ರಷ್ಟು ತೆರಿಗೆಯನ್ನು ಅಪ್ಲಿಕೇಶನ್‌ ಮೂಲಕ ಸಂಗ್ರಹಿಸಲಾಗಿದೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಕಾಡೂರಿನಲ್ಲಿ “ನಗದು ರಹಿತ’ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ 158 ಗ್ರಾ.ಪಂ.ಗಳಿಗೆ ವಿಸ್ತರಿಸುವಂತೆ ಆದೇಶ ಬಂದಿದ್ದು, ಹಂತ ಹಂತವಾಗಿ ಜಿಲ್ಲೆಯ ಎಲ್ಲ ವಿಸ್ತರಿಸಲಾಗುವುದು.
– ಶ್ರೀನಿವಾಸ್‌ ರಾವ್‌, ಜಿ.ಪಂ. ಮುಖ್ಯಯೋಜನಾಧಿಕಾರಿ, ಉಡುಪಿ ಜಿಲ್ಲೆ

Advertisement

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next