Advertisement

ಕ್ಯಾಶ್‌ ಆನ್‌ ಡೆಲಿವರಿ ಸಲ್ಲದು:ಆರ್‌ಬಿಐ

12:16 PM Jul 25, 2018 | Team Udayavani |

ಹೊಸದಿಲ್ಲಿ: ಫ್ಲಿಪ್‌ಕಾರ್ಟ್‌ ಸೇರಿದಂತೆ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಕ್ಯಾಶ್‌ ಆನ್‌ ಡೆಲಿವರಿ ವ್ಯವಸ್ಥೆ ಮಾಡುವಂತಿಲ್ಲ. ನಿಯಮ ಪ್ರಕಾರ ಅದು ಸಲ್ಲದು ಎಂದು ಆರ್‌ಬಿಐ ಹೇಳಿದೆ.

Advertisement

ಈ ಬಗ್ಗೆ ಇಂಡಿಯಾ ಎಫ್ಡಿಐ ವಾಚ್‌ ಎಂಬ ಸಂಸ್ಥೆಯ ಧರ್ಮೇಂದ್ರ ಕುಮಾರ್‌ ಎಂಬುವರು ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಹೀಗೆ ಉತ್ತರಿಸಿದೆ. ಸದ್ಯ ಇರುವ ನಗದು ಪಾವತಿ ವ್ಯವಸ್ಥೆ ನಿಯಂತ್ರಿಸಲು ಯಾವುದೇ ನಿಯಮ ಹೇರಿಲ್ಲ. ಆದರೆ ಈ ವ್ಯವಸ್ಥೆಯ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಿದೆ.  “ಅಮೆಜಾನ್‌, ಫ್ಲಿಪ್‌ಕಾರ್ಟ್‌ ಪೇಮೆಂಟ್‌ ಆ್ಯಂಡ್‌ ಸೆಟ್ಲಮೆಂಟ್‌ ಸಿಸ್ಟಮ್ಸ್‌ ಆ್ಯಕ್ಟ್ 2007ರಲ್ಲಿ ಪ್ರಸ್ತಾಪವಾಗಿರುವಂತೆ ಫ್ಲಿಪ್‌ಕಾರ್ಟ್‌, ಅಮೆಜಾನ್‌ಗಳು ವಿವಿಧ ವಸ್ತುಗಳನ್ನು ಒಂದೆಡೆ ಸೇರಿಸಿ ಮಾರಾಟ ಮಾಡುವ ಮಧ್ಯವರ್ತಿಗಳು. ಅವುಗಳಿಗೆ 2007ರ ಕಾಯ್ದೆಯನ್ವಯ ನಗದು ಪಡೆದು ವಸ್ತುಗಳನ್ನು ನೀಡುವ ಅಧಿಕಾರ ನೀಡಲಾಗಿಲ್ಲ’ ಎಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next