Advertisement

ಆಟೋಮೊಬೈಲ್‌, ಟ್ರಾಕ್ಟರ್‌ ರಂಗಕ್ಕೆ 8,000 ಕೋಟಿ ರೂ. ಆದಾಯ ನಷ್ಟ

03:39 PM Mar 02, 2017 | |

ಹೊಸದಿಲ್ಲಿ : ಕೇಂದ್ರ ಸರಕಾರ ಕಳೆದ ವರ್ಷ ನವೆಂಬರ್‌ನಲ್ಲಿ ಕೈಗೊಂಡಿದ್ದ ನೋಟು ನಿಷೇಧದ ಕ್ರಮದಿಂದಾಗಿ ಆಟೋಮೊಬೈಲ್‌ ಮತ್ತು ಟ್ರಾಕ್ಟರ್‌ ರಂಗದ ಕಂಪೆನಿಗಳಿಗೆ 8,000 ಕೋಟಿ ರೂ.ಗಳ ಆದಾಯ ನಷ್ಟವಾಗಿದೆ ಎಂದು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪೆನಿಯ ಆಡಳಿತ ನಿರ್ದೇಶಕ ಪವನ್‌ ಗೊಯೆಂಕಾ ಹೇಳಿದ್ದಾರೆ. 

Advertisement

ಕಳೆದ ವರ್ಷ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ನಲ್ಲಿ  ಅತ್ಯುತ್ತಮ ಹಬ್ಬದ ಸೀಸನ್‌ ಫ‌ಲವಾಗಿ ಉತ್ತುಂಗದ ಮಾರಾಟದಲ್ಲಿದ್ದ ಆಟೋಮೊಬೈಲ್‌ ಮತ್ತು ಟ್ರಾಕ್ಟರ್‌ ರಂಗದ ಕಂಪೆನಿಗಳು ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ  ಬಹುತೇಕ ನಿಲುಗಡೆಗೆ ಬಂದು ಮುಟ್ಟಿದವು ಎಂದು ಗೊಯೆಂಕಾ ಹೇಳಿದರು.

ನವೆಂಬರ್‌ ನಲ್ಲಿ ವಾಹನ ಮಾರಾಟ ಶೇ.5.48ರಷ್ಟು ಕುಗ್ಗಿದರೆ ಡಿಸೆಂಬರ್‌ನಲ್ಲಿ  ಅದು ಇನ್ನಷ್ಟು ತಳಮಟ್ಟಕ್ಕೆ ಹೋಯಿತು. ಇದು ಕಳೆದ 43 ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿ ದಾಖಲಾಯಿತು. ಈ ಹಿಂದೆ 2013ರ ಮಾರ್ಚ್‌ನಲ್ಲಿ  ವಾಹನಗಳ ಒಟ್ಟು ಮಾರಾಟವು ಶೇ.7.75ರ ಕುಸಿತವನ್ನು ಕಂಡಿತ್ತು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next