Advertisement

ಅಕ್ರಮ ಮದ್ಯ ಸಾಗಾಟ: ಹುಣಸಗಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು

05:40 PM Feb 23, 2023 | Team Udayavani |

ಹುಣಸಗಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಹುಣಸಗಿ ಪೊಲೀಸ್ ಠಾಣೆ ಅಧಿಕಾರಿಗಳು ಹುಣಸಗಿ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಹೆಬ್ಬಾಳ(ಬಿ) ಗ್ರಾಮದ ಬಸ್ ನಿಲ್ದಾಣ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಇಬ್ಬರ ವಿರುದ್ಧ ಅಬಕಾರಿ ಕಾಯ್ದೆಯಡಿ ಬುಧವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

ಶ್ರೀನಿವಾಸ ಬಸಪ್ಪ ಶೆಟ್ಟಿ(45) ಎಂಬ ಆರೋಪಿ ಬಳಿ ಎರಡು ಬ್ಯಾಗ್‌ಪೇಪರ್ ವಿಸ್ಕಿ ಪೋಚ್, ಹಾಗೂ ಹೆಬ್ಬಾಳ(ಬಿ) ಗ್ರಾಮದ ಅಂಬ್ರೇಶ ಚಂದಯ್ಯ ಗುತ್ತೇದಾರ(38) ಎಂಬಾತನ ಬಳಿ ಒಂದು ಬ್ಯಾಗ್‌ಪೇಪರ್ ವಿಸ್ಕಿ ಪೋಚ್ ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ಸಿ.ಬಿ.ವೇದಮೂರ್ತಿ ಅವರು ಗುರುವಾರ ಪ್ರಕಟಣೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next