Advertisement

JCB ಬಳಸಿ ಎಟಿಎಂನಿಂದ ಹಣ ಕಳವು ಯತ್ನ ಪ್ರಕರಣ; ನಾಲ್ವರು ಅಂತರ್‌ ಜಿಲ್ಲಾ ಕಳ್ಳರ ಬಂಧನ

03:09 PM Aug 21, 2023 | Team Udayavani |

ಸುರತ್ಕಲ್:‌ ಜೆಸಿಬಿ ಬಳಸಿಕೊಂಡು ಇಲ್ಲಿನ ರಾಜಶ್ರೀ ಕಟ್ಟಡದಲ್ಲಿ ಎಟಿಎಂಗೆ ಕನ್ನ ಹಾಕಲು ಯತ್ನಿಸಿದ್ದ ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ನಗರ ಪೊಲೀಸರು ಬಂಧಿಸಿರುವ ಘಟನೆ ಆ.21ರ ಸೋಮವಾರ ನಡೆದಿದೆ.

Advertisement

ಶಿವಮೊಗ್ಗ ಮೂಲದ ದೇವರಾಜ್ (24), ಭರತ್ ಹೆಚ್ (20), ನಾಗರಾಜ ನಾಯ್ಕ್ (21) ಮತ್ತು ಧನರಾಜ್ ನಾಯ್ಕ್ (22) ಬಂಧಿತರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸುಮಾರು 50 ಸಾವಿರ ಮೌಲ್ಯದ ಹೀರೋ ಸ್ಲೆಂಡರ್‌ ಬೈಕ್‌ ಹಾಗೂ 2 ಆಂಡ್ರೋಯ್ಡ್‌ ಮೊಬೈಲ್‌ ಫೋನ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ನಾಲ್ವರು ಅಂತರ್‌ ಜಿಲ್ಲಾ ಕಲ್ಳರ ವಿರುದ್ಧ ಐಪಿಸಿ ಸೆಕ್ಷನ್ 457, 380, 511 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೇವರಾಜ್ ನಾಯ್ಕ್ ಹಾಗೂ ನಾಗರಾಜ ನಾಯ್ಕ ವಿರುದ್ಧ ಶಿಕಾರಿಪುರ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ವಿಚಾರಣೆ ವೇಳೆ ಆಗಸ್ಟ್ 26 ರಂದು ಶಿವಮೊಗ್ಗದಲ್ಲಿ ವಿನೋಭಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ ಆಕ್ಸಿಸ್ ಬ್ಯಾಂಕಿನ ಎಟಿಎಂ ಒಡೆಯಲು ಯತ್ನಿಸಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

Advertisement

ಆರೋಪಿಗಳು ಆಗಸ್ಟ್ 4 ರ ಮಧ್ಯರಾತ್ರಿ ಪಡುಬಿದ್ರಿ-ಕಾರ್ಕಳ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಜೆಸಿಬಿ ಕದ್ದು, ಸುರತ್ಕಲ್‌ನಲ್ಲಿ ಎಟಿಎಂ ಕಳ್ಳತನ ಕೃತ್ಯಕ್ಕೆ ಯತ್ನಿಸಿದ್ದರು. ಆರೋಪಿಗಳ ಪೈಕಿ ಮೂವರಿಗೆ ಕೋರ್ಟ್ 4 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದು, ನಾಲ್ಕನೇ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next