Advertisement

ಸೋನಿಯಾ ವಿರುದ್ಧ ಕೇಸ್‌ ದ್ವೇಷದ ರಾಜಕೀಯ: ಐವನ್‌

08:40 AM May 23, 2020 | mahesh |

ಮಂಗಳೂರು: ಪಿಎಂ ಕೇರ್‌ ನಿಧಿಯ ಬಗ್ಗೆ ದೇಶದ ಜನರಿಗೆ ಮಾಹಿತಿ ಕೊಡಿ ಎಂದು ಕೇಳಿದ ಕಾರಣಕ್ಕೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ಎಫ್‌ಐಆರ್‌ ದಾಖಲಿಸಿರುವುದು ಖಂಡನೀಯ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಶ್ನಿಸುವವರ ಹಕ್ಕನ್ನು ಕಸಿಯುವ ಇಂತಹ ಘಟನೆ ದ್ವೇಷದ ರಾಜಕಾರಣಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಎಂ ಕೇರ್‌ನ ಹಣ ಎಷ್ಟಿದೆ, ಹಣ ಹೇಗೆ ವಿನಿಯೋಗ ಮಾಡಲಾಗಿದೆ ಎಂಬುದನ್ನು ಕೇಳುವುದೇ ತಪ್ಪಾ? ಯಾರಿಗೆ ಯಾಕಾಗಿ ಬಳಕೆ ಆಗಿದೆ ಎಂಬುದರ ವಿವರ ಕೊಡಲು ಏನು ಸಮಸ್ಯೆಯಿದೆ? ಪ್ರಧಾನಿಯನ್ನು ಈ ಬಗ್ಗೆ ಪ್ರಶ್ನಿಸಿದರೆ ದೇಶವಿರೋಧಿ ರೀತಿಯಲ್ಲಿ ಬಿಂಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಾತನ್ನೇ ದಮನ ಮಾಡುವುದಕ್ಕೆ ಕಾಂಗ್ರೆಸ್‌ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ನಿರಂತರ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ತತ್‌ಕ್ಷಣವೇ ಕೇಸ್‌ ಅನ್ನು ವಾಪಸ್‌ ಪಡೆಯಬೇಕು ಮತ್ತು ಕೇಸ್‌ ರಿಜಿಸ್ಟರ್‌ ಮಾಡಿದ ಪೊಲೀಸ್‌ ಅಧಿಕಾರಿಯ ಮೇಲೆ ತನಿಖೆಯಾಗಬೇಕು ಎಂದವರು ಆಗ್ರಹಿಸಿದರು.

ಬಸ್‌ನವರ ಸಮಸ್ಯೆಗೆ ಸ್ಪಂದಿಸದ ಸರಕಾರ
ರಾಜ್ಯ ಸರಕಾರ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿದ್ದರೂ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್‌ ಆರಂಭವಾಗಿಲ್ಲ. ಬಸ್‌ ಮಾಲಕರ ಬೇಡಿಕೆಯನ್ನು ಪೂರೈಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾ ಗಿದೆ. ಬಸ್‌ಗಳನ್ನೇ ನಂಬಿರುವ ಸಾವಿರಾರು ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಪ್ಯಾಕೇಜ್‌ ಕೂಡ ನೀಡಿಲ್ಲ. ರಿಕ್ಷಾ ಚಾಲಕರ ಪ್ಯಾಕೇಜ್‌ ಘೋಷಿಸಿದ್ದರೂ ಸರಕಾರ ಸ್ಪಷ್ಟತೆ ನೀಡಿಲ್ಲ. ಬೀಡಿ ಕಾರ್ಮಿಕರನ್ನು ಸರಕಾರ ಕೈಬಿಟ್ಟಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next