Advertisement
ನಗರದ ಸಿಟಿ ಸೆಂಟರ್‌ನಲ್ಲಿರುವ ರಿಲಯನ್ಸ್ ಮಾರ್ಟ್‌ಗೆ ತೆರಳಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಎನ್.ವಿಷ್ಣುವರ್ಧನ್ ಅವರು ಪ್ರವೇಶದ್ವಾರದಲ್ಲಿ ನಡೆಸುತ್ತಿರುವ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಬಳಕೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ತರಕಾರಿ ದರಗಳನ್ನು ಪರಿಶೀಲನೆ ನಡೆಸಿದರು. ಈ ಬಗ್ಗೆ ವ್ಯವಸ್ಥಾಪಕರಿಂದ ಮಾಹಿತಿ ಪಡೆದು ಸರಕಾರದ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಸೂಚನೆ ನೀಡಿದರು.
ಕೆಎಂ ಮಾರ್ಗದ ತರಕಾರಿ ಅಂಗಡಿಗೆ ಭೇಟಿ ನೀಡಿ ಗ್ರಾಹಕರ ಹಾಗೂ ಅಂಗಡಿ ಮಾಲಕರ ಸುರಕ್ಷೆ ಬಗ್ಗೆ ಸಲಹೆ ನೀಡಿದರು. ಒಬ್ಬ ಗ್ರಾಹಕನಿಂದ ಇನ್ನೊಬ್ಬ ಗ್ರಾಹಕನಿಗೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ಮತ್ತು ಮುಖಕ್ಕೆ ಮಾಸ್ಕ್ ಧರಿಸುವಂತೆ ಸೂಚಿಸಿದರು. ಯಾವುದೇ ಕಾರಣಕ್ಕೂ ತರಕಾರಿ ದರ ಏರಿಕೆ ಮಾಡದಂತೆ ಎಚ್ಚರಿಕೆ ನೀಡಿದರು. ಶೀತ, ಜ್ವರ ಲಕ್ಷಣವಿರುವವರು ಬಂದ ತತ್‌ಕ್ಷಣ ಆರೋಗ್ಯ ಇಲಾಖೆಗೆ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಿದರು. ಲಾಡ್ಜ್ ಪರಿಶೀಲನೆ
ಎಸ್ಪಿ ವಿಷ್ಣುವರ್ಧನ್ ಅವರು ಸಮೀಪದ ಹಳೇ ಡಯಾನಾ ಸರ್ಕಲ್ ಸಮೀಪದ ಲಾಡ್ಜ್ಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
Related Articles
ಇದೇ ಸಂದರ್ಭ ಇತರ ಮಾರ್ಕೆಟ್‌ಗೂ ಇಲ್ಲಿನ ತರಕಾರಿ ದರಕ್ಕೂ ಸಾಕಷ್ಟು ವ್ಯಾತ್ಯಾಸಗಳಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರ್‌ಗೆ ನಿರ್ದೇಶನ ನೀಡಿದರು. ಈ ಬಗ್ಗೆಯೂ ವ್ಯವಸ್ಥಾಪಕರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
Advertisement