Advertisement
ಜೆಡಿಎಸ್‌ನ ಡಾ| ಅನ್ನದಾನಿ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮೂರೂ ಪಕ್ಷಗಳ ಸದಸ್ಯರು ಪುಂಡಾಟಿಕೆಯನ್ನು ಒಕ್ಕೊರ ಲಿನಿಂದ ಖಂಡಿಸಿದರು, ಇಂಥ ಕೃತ್ಯ ಎಸಗುವವರು “ದೇಶದ್ರೋಹಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿ ದರು. ಎಂಇಎಸ್ ಬಗ್ಗೆ ಕಿಡಿಕಾರಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡನ ನಿರ್ಣಯ ಕೈಗೊಳ್ಳುವ ಸಲಹೆ ನೀಡಿದರು. ಇದಕ್ಕೆ ಪಕ್ಷಾತೀತ ಸಹಮತ ವ್ಯಕ್ತವಾಯಿತು. ಸುವರ್ಣ ಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಸ್ಥಾಪಿಸ ಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
Related Articles
Advertisement
ಮಹಾರಾಷ್ಟ್ರದ ಜತ್ ತಾಲೂಕಿನ 40 ಗ್ರಾ.ಪಂ.ಗಳು ಅಲ್ಲಿನ ಸರಕಾರ ತಮಗೆ ಕುಡಿಯಲು ನೀರು ಒದಗಿಸಲು ವಿಫಲವಾಗಿದೆ ಎಂದು ಆರೋಪಿಸಿ, ಕರ್ನಾಟಕಕ್ಕೆ ಸೇರಿಸುವಂತೆ ನಿರ್ಣಯ ಕೈಗೊಂಡಿವೆ. ಅವರು ಒಪ್ಪಿದರೆ ಸೇರಿಸಿಕೊಳ್ಳಲು ಸಿದ್ಧರಿದ್ದೇವೆ. ಇದು ವಿವಾದವಾಗಬಹುದು. ಅದನ್ನು ಎದುರಿಸಲು ತಯಾರಿದ್ದೇವೆ ಎಂದರು.ಎಂಇಎಸ್ ನಿಷೇಧಿಸುವ ಬಗ್ಗೆ ಕಾನೂನು ಅವಕಾಶವನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅವಕಾಶ ಇಲ್ಲದಿದ್ದರೆ ಎಂಇಎಸ್ ನಿಯಂತ್ರಿಸುತ್ತೇವೆ. ಗಡಿ ಅಭಿವೃದ್ಧಿ, ಮಹಾರಾಷ್ಟ್ರ ದಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಒಕ್ಕೊರಲ ನಿರ್ಣಯ
ಗಡಿ ವಿವಾದದಲ್ಲಿ ಮಹಾಜನ ಆಯೋಗದ ವರದಿ ಅಂತಿಮ. ರಾಜ್ಯದ ಈಗಿರುವ ಗಡಿ ಯಥಾಸ್ಥಿತಿ ಕಾಪಾಡಲು ಬದ್ಧವಾಗಿದೆ. ಆದರೂ ಗಡಿ ವಿವಾದವನ್ನು ಜೀವಂತ ಇಡುತ್ತ ಬರಲಾಗುತ್ತಿದೆ. ರಾಯಣ್ಣನ ಪ್ರತಿಮೆ, ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವ ಪ್ರಕರಣವನ್ನು ಸಭೆ ಖಂಡಿಸುತ್ತದೆ. ಇದನ್ನು ದೇಶದ್ರೋಹದ ಕೆಲಸ ಎಂದು ಪರಿಗಣಿಸಿ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸ ಲಾಗುವುದು. ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯಲಾಗುವುದು. ಎರಡೂ ರಾಜ್ಯಗಳ ನಡುವೆ ಸಾಮರಸ್ಯ ಇರಬೇಕೆಂದು ಬಯಸುತ್ತೇವೆ. ಗಡಿ ಆಚೆಗೆ ನಡೆಯುತ್ತಿರುವ ಕುಕೃತ್ಯವನ್ನು ತಡೆ ಯಬೇಕು ಎಂದು ಸದನ ಒಕ್ಕೊರಲಿನಿಂದ ನಿರ್ಣಯಿಸಿತು. ನಾಡು ನುಡಿಗೆ ಅವಮಾನವನ್ನು ಯಾವ ಸರಕಾರವೂ ಸಹಿ ಸುವುದಿಲ್ಲ. ಪ್ರತಿ ಭಟನೆಯ ಹೆಸರಿನಲ್ಲಿ ಮಹನೀಯರ ಪ್ರತಿಮೆ ಗಳಿಗೆ ಅವಮಾನವನ್ನು ಖಂಡಿಸು ತ್ತೇನೆ. ಪುಂಡಾಟಿಕೆ ಮಾಡಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು.
-ಬಿ.ಎಸ್. ಯಡಿಯೂರಪ್ಪ , ಮಾಜಿ ಸಿಎಂ ರಾಯಣ್ಣ , ಶಿವಾಜಿ ಮೂರ್ತಿಗಳ ಮೇಲಿನ ದಾಳಿ ಖಂಡಿಸುತ್ತೇನೆ. ಈ ಕೃತ್ಯದಲ್ಲಿ ಪಾಲ್ಗೊಂಡವರನ್ನು ಗಡಿಪಾರು ಮಾಡಿ, ಕಾನೂನಿ ನಲ್ಲಿ ಅವಕಾಶ ಇದ್ದರೆ ಎಂಇಎಸ್ ನಿಷೇಧ ಮಾಡಿ. ಮಹಾರಾಷ್ಟ್ರ ಮುಖ್ಯಮಂತ್ರಿಗೆ ಅಲ್ಲಿ ಕನ್ನಡ ಬಾವುಟ ಸುಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ.
-ಸಿದ್ದರಾಮಯ್ಯ, ವಿಪಕ್ಷ ನಾಯಕ