Advertisement

ಅಮ್ಮುಂಜೆ ಡಿಜೆ ನೃತ್ಯ ವಿಚಾರ ಮದುಮಗ ಸೇರಿ ಇತರರ ವಿರುದ್ಧ ಪ್ರಕರಣ

09:43 AM Jul 06, 2020 | mahesh |

ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದ ಮದರಂಗಿ ಕಾರ್ಯಕ್ರಮದಲ್ಲಿ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಧ್ವನಿವರ್ಧಕ ಬಳಸಿ ಗುಂಪು ಸೇರಿ ನೃತ್ಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುಮಗ, ಆತನ ತಂದೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಅಮ್ಮುಂಜೆ ಗ್ರಾಮ ನಿವಾಸಿ ಶಿವಪ್ಪ ಪೂಜಾರಿ ಹಾಗೂ ಅವರ ಪುತ್ರ ಮದುಮಗ ತಿಲಕ್‌ರಾಜ್‌ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವಕರು ಗುಂಪು ಸೇರಿ ಧ್ವನಿವರ್ಧಕ ಬಳಸಿ ನೃತ್ಯ ಮಾಡಿರುವ ವೀಡಿಯೋ ವೈರಲ್‌ ಆಗಿದ್ದು, ಆದೇಶ ಉಲ್ಲಂಘಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಆದೇಶದಂತೆ ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಅವರು ತನಿಖೆ ಪ್ರಾರಂಭಿಸಿದ್ದರು.

ತಿಲಕ್‌ರಾಜ್‌ ಅವರ ವಿವಾಹದ ಹಿನ್ನೆಲೆಯಲ್ಲಿ ಜು. 1ರಂದು ನಡೆದ ಮದರಂಗಿ ಕಾರ್ಯಕ್ರಮದಲ್ಲಿ ಲಾಕ್‌ಡೌನ್‌ ಆದೇಶ ಉಲ್ಲಂ ಸಲಾಗಿತ್ತು. ಆದರೆ ಅವರು ಸ್ಥಳೀಯ ಗ್ರಾ.ಪಂ.ನಲ್ಲಿ 50 ಜನರು ಸೇರಿ ಮದುವೆ ಸಮಾರಂಭ ನಡೆಸುವ ಅನುಮತಿ ಪಡೆದಿದ್ದರು.

ಪೊಲೀಸ್‌ ತನಿಖೆಯ ವೇಳೆ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಎಪಿಡೆಮಿಕ್‌ ಡಿಸೀಸ್‌ ಆರ್ಡಿನೆನ್ಸ್‌ 2020ರಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next