Advertisement

ಮುನಿರತ್ನ ವಿರುದ್ಧದ ಕೇಸ್‌: ವಿಚಾರಣೆ ಮುಂದೂಡಿಕೆ

12:33 AM Feb 12, 2020 | Team Udayavani |

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುನಿರತ್ನ ಅವರು ಅಕ್ರಮವೆಸಗಿ ಜಯಗಳಿಸಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯವೇನಿದೆ ಎಂದು ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಅವರನ್ನು ಹೈಕೋರ್ಟ್‌ ಪ್ರಶ್ನಿಸಿದೆ.

Advertisement

ರಾಜರಾಜೇಶ್ವರಿ ನಗರ ವಿಧಾನಭಾ ಕ್ಷೇತ್ರದಿಂದ ಕಾಂಗ್ರೆಸ್‌ ನಿಂದ ಮುನಿರತ್ನ (ಅನರ್ಹಗೊಂಡಿರುವ ಶಾಸಕ) ಆಯ್ಕೆಯಾಗಿರುವುದನ್ನು ಅಸಿಂಧು ಗೊಳಿಸಿ, ತಮ್ಮನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮುನಿರತ್ನ ಪರ ವಕೀಲರು ವಾದ ಮಂಡಿಸಿ, ಪರಾಜಿತ ಅಭ್ಯರ್ಥಿ ಆರೋಪ ಹಾಗೂ ತಮ್ಮನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕೆಂಬ ಅವರ ಮನವಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಅರ್ಜಿ ವಜಾಗೊಳಿಸಿದರೆ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸಲು ಸಾಧ್ಯವಾಗುತ್ತದೆ ಎಂದರು.

ಇದಕ್ಕೆ ನ್ಯಾಯಪೀಠ ಪ್ರತಿಕ್ರಿಯಿಸಿ, ಮುನಿರತ್ನ ಯಾವ ರೀತಿ ಚುನಾವಣಾ ಅಕ್ರಮವೆಸಗಿ ಗೆದ್ದಿದ್ದಾರೆ. ಅಕ್ರಮ ಸಾಬೀತು ಪಡಿಸಲು ನಿಮ್ಮ ಬಳಿ ಇರುವ ಸಾಕ್ಷ್ಯಗಳೇನು, ಇಂತಹದ್ದೇ ಕಾರ ಣದಿಂದ ಅರ್ಜಿ ದಾರರಿಗೆ ಬರಬೇಕಾದ ಮತ ಮುನಿರತ್ನ ಪಾಲಾ ಗಿವೆ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡು ವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಫೆ.13ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next