Advertisement

ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ : ಸೈಫ್ ಅಲಿಖಾನ್‌ ಸೇರಿ 5 ಮಂದಿ ವಿರುದ್ಧ ಕೇಸ್‌

11:50 AM Jan 24, 2021 | Team Udayavani |

ಬೆಂಗಳೂರು: ವೆಬ್‌ ಸರಣಿ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ “ತಾಂಡವ್‌’ ನಿರ್ಮಾಣ ತಂಡ ಹಾಗೂ ಅದನ್ನು ಪ್ರಸಾರ ಮಾಡಿದ ಅಮೆಜಾನ್‌ ಪ್ರೈಮ್‌ ಮುಖ್ಯಸ್ಥರ ವಿರುದ್ಧ ಕೆ.ಆರ್‌.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಿರಣ್‌ ಆರಾಧ್ಯ ಎಂಬವರು ನೀಡಿದ ದೂರಿನ ಮೇರೆಗೆ ತಾಂಡವ್‌’ ವೆಬ್‌ ಸರಣಿ ನಿರ್ದೇಶಕ ಅಲಿ ಅಬ್ಟಾಸ್‌ ಜಾಫ‌ರ್‌, ನಿರ್ಮಾಪಕ ಫ‌ರಾನ್‌ ಅಕ್ತ ರ್‌,ನಟರಾದ ಸೈಫ್ ಅಲಿ ಖಾನ್‌, ಮೊಹಮ್ಮದ್‌ ಜಿಸಾನ್‌ ಅಯೂಬ್‌ ಹಾಗೂ ಅಮೆಜಾನ್‌ ಪ್ರೈಮ್‌ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದರು. ವೆಬ್‌ ಸರಣಿಯ ದೃಶ್ಯವೊಂದರಲ್ಲಿ, ಹಿಂದೂ ಧರ್ಮದ ದೇವರಾದ ಈಶ್ವರನ ಬಾಯಿಯಲ್ಲಿ ಅವಾಚ್ಯ ಸಂಭಾಷಣೆ ಹೇಳಿಸಲಾಗಿದೆ.

ಉದ್ದೇಶಪೂರ್ವಕವಾಗಿಯೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಕಿರಣ್‌ ಆರಾಧ್ಯ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ:ಡಿಕೆಶಿಗೆ ಧಮ್‌ ಇದ್ರೆ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ: ಈಶ್ವರಪ್ಪ

Advertisement

Udayavani is now on Telegram. Click here to join our channel and stay updated with the latest news.

Next